ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪೇಂದ್ರ ನಿರ್ದೇಶನದ ಹೊಸ ಚಿತ್ರದ ಪೋಸ್ಟರ್ ಲೀಕ್?

ಸಿನಿಮಾ ರಂಗದಲ್ಲಿ 'ರಿಯಲ್ ಸ್ಟಾರ್‌' ಉಪೇಂದ್ರ ಅವರು ಆರಂಭದಲ್ಲಿ ನಿರ್ದೇಶಕರಾಗಿ ಬಂದವರು. ನಂತರ ಆನಂತರ ನಟರಾದರು. ಕೊನೆಗೆ ನಟನೆಯಲ್ಲೇ ಬ್ಯುಸಿ ಆದ ಅವರು ಆಗೊಮ್ಮೆ ಈಗೊಮ್ಮೆ ಒಂದು ಸಿನಿಮಾ ನಿರ್ದೇಶನ ಮಾಡ್ತಾರೆ. ಆರು ವರ್ಷಗಳ ಹಿಂದೆ ರಿಲೀಸ್ ಆದ 'ಉಪ್ಪಿ 2' ಬಳಿಕ ಉಪೇಂದ್ರ ನಿರ್ದೇಶನದಿಂದ ದೂರ ಉಳಿದಿದ್ದರು. ಆದರೆ ಇತ್ತೀಚೆಗೆ ಅವರು ಮಾತನಾಡುತ್ತಾ, ನಿರ್ದೇಶನಕ್ಕೆ ತಾನು ತಯಾರಾಗಿದ್ದೇನೆ, ಸ್ಕ್ರಿಪ್ಟಿಂಗ್ ಕೆಲಸಗಳು ನಡೆಯುತ್ತಿವೆ ಎಂಬ ಸುಳಿವನ್ನು ಬಿಟ್ಟುಕೊಟ್ಟಿದ್ದರು.

ಇದೀಗ ಸ್ಯಾಂಡಲ್​ವುಡ್ ಅಂಗಳದಿಂದ ಹೊಸ ಸುದ್ದಿಯೊಂದು ಬಂದಿದೆ. ಉಪೇಂದ್ರ ನಿರ್ದೇಶನದ ಚಿತ್ರ ಅವರ ಜನ್ಮದಿನವಾದ ಸೆಪ್ಟೆಂಬರ್ 18ಕ್ಕೆ ಘೋಷಣೆಯಾಗಲಿದೆ ಎನ್ನಲಾಗಿದೆ. ಇದರೊಂದಿಗೆ ಹೊಸ ಚಿತ್ರ ‘ಯು & ಐ' (U and I)ನ ಪೋಸ್ಟರ್ ಕೂಡ ಲೀಕ್ ಆಗಿದೆ ಎನ್ನಲಾಗಿದ್ದು, ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಮೇಲ್ನೋಟಕ್ಕೆ ನಾಮದ ಚಿಹ್ನೆಯಂತೆ ಕಾಣುವ ಈ ಟೈಟಲ್, ಆಂಗ್ಲ ಭಾಷೆಯ ‘ಯು’ ಮತ್ತು ‘ಐ’ಯನ್ನು ಒಳಗೊಂಡಿದೆ. ಇದರೊಂದಿಗೆ ಉಪೇಂದ್ರರ ಬಹುತೇಕ ಚಿತ್ರಗಳಲ್ಲಿ ಕಾಣಸಿಗುವ ‘ನೀನು’, ‘ನಾನು’ ಇಲ್ಲಿಯೂ ಮುಂದುವರೆಯಲಿದೆಯೇ ಎಂಬ ಕುತೂಹಲ ಹುಟ್ಟುಹಾಕಿದೆ. ಪೋಸ್ಟರ್​ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಸುಳಿವನ್ನೂ ನೀಡಲಾಗಿದೆ.

ಉಪೇಂದ್ರ ನಿರ್ದೇಶನದ ಕ್ಯಾಪ್ ತೊಡಲಿರುವ ಸಿನಿಮಾದ ಟೈಟಲ್ ಇದು ಎನ್ನಲಾಗಿದ್ದು, ಟ್ವಿಟರ್​ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಆದರೆ ಇದರ ಕುರಿತು ಇನ್ನೂ ಉಪೇಂದ್ರ ಅಧಿಕೃತ ಮಾಹಿತಿ ನೀಡಿಲ್ಲ. ಕೆಲವು ಮೂಲಗಳ ಪ್ರಕಾರ ಇದು ಅಭಿಮಾನಿಗಳು ರೂಪಿಸಿದ ಪೋಸ್ಟರ್ ಎನ್ನಲಾಗುತ್ತಿದೆ. ಆದರೆ ಇನ್ನೂ ಅಧಿಕೃತಗೊಂಡಿಲ್ಲ. ಒಟ್ಟಿನಲ್ಲಿ ಉಪೇಂದ್ರ ಅವರ ಅಭಿಮಾನಿ ಬಳಗ ಇದನ್ನು ಸಂತಸದಿಂದ ಶೇರ್ ಮಾಡುತ್ತಿದ್ದು, ರಿಯಲ್ ಸ್ಟಾರ್ ನಿರ್ದೇಶನಕ್ಕೆ ಭರ್ಜರಿ ವೇದಿಕೆ ಕಲ್ಪಿಸುತ್ತಿದ್ದಾರೆ.

Edited By : Vijay Kumar
PublicNext

PublicNext

15/09/2021 08:48 pm

Cinque Terre

36.21 K

Cinque Terre

5