ಮುಂಬೈ: ಖ್ಯಾತ ಬಾಲಿವುಡ್ ನಟ ಗೋವಿಂದ ಹಾಗೂ ಅವರ ಸೋದರಳಿಯ ಕೃಷ್ಣ ಅವರ ನಡುವಿನ ಜಗಳ ಇದೀಗ ಬೀದಿಗೆ ಬಿದ್ದಿದೆ.
ನಟ ಗೋವಿಂದ ಕುಟುಂಬದ ಜೊತೆ ತಮ್ಮ ಪತಿಯ ಜಗಳದ ಬಗ್ಗೆ ಮಾತನಾಡಿರುವ ಹಾಸ್ಯ ನಟ ಕೃಷ್ಣ ಅವರ ಪತ್ನಿ ಹಾಗೂ ನಟಿ ಕಾಶ್ಮೇರಾ ಶಾ, ಕಳೆದ ಐದು ವರ್ಷಗಳಿಂದ ಈ ಜನರ (ಗೋವಿಂದ್ ಫ್ಯಾಮಿಲಿ) ಜೊತೆಗಿನ ಸಂಬಂಧ ನಾನು ಕಳೆದುಕೊಂಡಿದ್ದೇನೆ. ನನಗೆ ಇವರ ಜಗಳದ ಬಗ್ಗೆ ಆಸಕ್ತಿ ಇಲ್ಲ ಎಂದಿದ್ದಾರೆ.
ಇನ್ನು ಇತ್ತೀಚಿಗೆ 'ದಿ ಕಪಿಲ್ ಶರ್ಮಾ ಶೋ'ನಲ್ಲಿ ಕೃಷ್ಣ ಅಭಿಷೇಕ್ ಇರದಿದ್ದರೆ ಮಾತ್ರ ನಾವು ಬರುತ್ತೇವೆ ಎಂದು ನಟ ಗೋವಿಂದ ಪತ್ನಿ ಸುನೀತಾ ಅಹುಜಾ ಶರತ್ತು ಹಾಕಿದ್ದರಂತೆ. ಹಾಗಾಗಿ ಕೃಷ್ಣ ಅವರು ಗೋವಿಂದ ಎಪಿಸೋಡ್ ನಲ್ಲಿ ಕಾಣಿಸಿಕೊಂಡಿರಲಿಲ್ಲ. 'ನಮ್ಮ ಮಧ್ಯೆ ಇರುವ ಸಮಸ್ಯೆ ಎಂದಿಗೂ ಬಗೆಹರಿಯೋದಿಲ್ಲ, ನನಗೆ ಎಂದಿಗೂ ಕೃಷ್ಣ ಅಭಿಷೇಕ್ ಮುಖ ನೋಡಲು ಇಷ್ಟವಿಲ್ಲ' ಎಂದು ಸುನೀತಾ ಅಹುಜಾ ಹೇಳಿದ್ದಾರೆ.
'ದಿ ಕಪಿಲ್ ಶರ್ಮಾ ಶೋ'ನಲ್ಲಿ ನಾನು ಹಾಗೂ ನನ್ನ ಕುಟುಂಬ ಅತಿಥಿಯಾಗಿ ಬರುವಾಗ ನಾನು ಭಾಗವಹಿಸೋದಿಲ್ಲ ಎಂದು ಕೃಷ್ಣ ಅಭಿಷೇಕ್ ಹೇಳಿದ್ದಾನೆ. ಅದರಿಂದ ಬೇಸರ ಆಗಿದೆ' ಎಂದು ಸುನೀತಾ ಅಹುಜಾ ಅವರು ಹೇಳಿದ್ದಾರೆ. ಒಂದೇ ವೇದಿಕೆಯನ್ನು ಹಂಚಿಕೊಳ್ಳಲು ಕೃಷ್ಣ ಅಭಿಷೇಕ್ ಹಾಗೂ ಗೋವಿಂದ ಕುಟುಂಬಕ್ಕೆ ಇಷ್ಟ ಇಲ್ಲವಂತೆ. "ವೈಯಕ್ತಿಕ ವಿಷಯವನ್ನು ಸಾರ್ವಜನಿಕವಾಗಿ ನಾನು ಚರ್ಚೆ ಮಾಡೋದಿಲ್ಲ ಎಂದು ನಟ ಗೋವಿಂದ ಅವರು ಕಳೆದ ವರ್ಷವೇ ಹೇಳಿಕೆ ನೀಡಿದ್ದರು. ಹೀಗಾಗಿ ನಾವು ಸುಮ್ಮನಿದ್ದೆವು. ಈಗ ಮತ್ತೆ ಈ ವಿಚಾರ ಪ್ರಸ್ತಾಪ ಆಗುವ ಹಾಗೆ ಆಗಿದ್ದಕ್ಕೆ ಮಾತನಾಡಿದ್ದೇವೆ" ಎಂದು ಸುನೀತಾ ಅವರು ಹೇಳಿಕೆ ನೀಡಿದ್ದಾರೆ.
PublicNext
12/09/2021 08:49 pm