ಬೆಂಗಳೂರು : ಆಟೋ ರಾಜ, ನಾ ನಿನ್ನ ಬಿಡಲಾರೆ ಸಿನಿಮಾ ನಿರ್ಮಾಪಕ ಸಿ. ಜಯರಾಮ್ ಇನ್ನು ನೆನಪು ಮಾತ್ರ.. ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಸಿ. ಜಯರಾಮ್ ನಿಧನರಾಗಿದ್ದಾರೆ. ಸೆ.9 ರ ಬೆಳಗಿನಜಾವ ಕೊನೆಯುಸಿರೆಳೆದಿದ್ದಾರೆ. 70-80ರ ದಶಕದಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಜಯರಾಮ್, ಆನಂತರ ಸಿನಿಮಾ ನಿರ್ಮಾಣದಿಂದ ದೂರ ಉಳಿದಿದ್ದರು. ಜಯರಾಮ್ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ನಿರ್ಮಾಪಕರು ಕಂಬನಿ ಮಿಡಿದಿದ್ದಾರೆ.
1976ರಲ್ಲಿ ತೆರೆಕಂಡ ಶ್ರೀನಾಥ್ ಮತ್ತು ಆರತಿ ಅಭಿನಯದ 'ಪಾವನ ಗಂಗ', ರಜನಿಕಾಂತ್ ಮತ್ತು ವಿಷ್ಣುವರ್ಧನ್ ಒಟ್ಟಿಗೆ ನಟಿಸಿದ್ದ 'ಗಲಾಟೆ ಸಂಸಾರ' ಆನಂತ್ ನಾಗ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ 'ನಾ ನಿನ್ನ ಬಿಡಲಾರೆ', ಶಂಕರ್ ನಾಗ್ ಅವರ ಮೆಗಾ ಹಿಟ್ ಸಿನಿಮಾ 'ಆಟೋ ರಾಜ' ಮುಂತಾದ ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿ ಹೆಸರು ಮಾಡಿದ್ದರು.
PublicNext
09/09/2021 11:35 am