ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾದಕ ಲುಕ್..ಕಪ್ಪು ಉಡುಗೆ..ಕಣ್ಸನ್ನೆ ಹುಡುಗಿ ಕಮಾಲ್

ಮಾದಕ ಲುಕ್ ನಿಂದ ಮತ್ತೇರಿಸಿದ ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್ ಪಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಸಿನಿಮಾಗಳಿಗಿಂತ ಹೆಚ್ಚಾಗಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಪ್ರವಾಸ, ಫ್ರೆಂಡ್ಸ್ ಹೀಗೆ ನಾನಾ ರೀತಿಯ ವಿಷಯಗಳಿಂದಾಗಿ ಸದ್ದಿಯಲ್ಲಿರುತ್ತಾರೆ.

ಸದ್ಯ ಪ್ರಿಯಾ ವಾರಿಯರ್ ಸಿಕ್ಕಾಪಟ್ಟೆ ಬೋಲ್ಡ್ ಹಾಗೂ ಹಾಟ್ ಫೋಟೋ ಶೂಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಪೋಸ್ ಕೊಟ್ಟಿರುವ ಈ ಫೋಟೋಶೂಟ್ ನ ಚಿತ್ರಗಳು ನೆಟ್ಟಿಗರ ನಿದ್ದೆಗೆಡಿಸಿದೆ. ಕಪ್ಪು ಬಣ್ಣದ ಗೌನ್ ತೊಟ್ಟ ಪ್ರಿಯಾ ಪ್ರಕಾಶ್ ಅವರ ಮಾದಕ ನೋಟ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದೆ. ಹೌದು, ಸದ್ಯ ಪ್ರಿಯಾ ಅವರ ಈ ಸ್ಟಿಲ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಮಲಯಾಳಂ ಸಿನಿಮಾ ಒರು ಆಡಾರ್ ಲವ್ ವಿಡಿಯೋದಿಂದಾಗಿ. ಒರು ಆಡಾರ್ ಲವ್ ಸಿನಿಮಾದ ಆ ಪುಟ್ಟ ವಿಡಿಯೋ ತುಣುಕಿನಲ್ಲಿ ಪ್ರಿಯಾ ವಾರಿಯರ್ ಕಣ್ಣು ಹೊಡೆದ ರೀತಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಇದರಿಂದಲೇ ಕಣ್ಸನ್ನೆ ಬೆಡಗಿ ಎಂದೇ ಖ್ಯಾತರಾದರು.

Edited By : Nirmala Aralikatti
PublicNext

PublicNext

07/09/2021 03:48 pm

Cinque Terre

113.25 K

Cinque Terre

0