ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಇದೀಗ ಮುಂಬೈಗೆ ವಾಸ್ತವ್ಯ ಬದಲಾಯಿಸಿದ್ದಾರೆ. ಹಿಂದಿಯ ಎರಡು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು ಎರಡೂ ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿವೆ.
ಸಿನಿಮಾ ಬಿಡುಗಡೆ ಆಗುವ ಮುನ್ನವೇ ಮುಂಬೈನಲ್ಲಿ ಅಭಿಮಾನಿವರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ.
ನಿನ್ನೆಯಷ್ಟೇ ನಟಿ ರಶ್ಮಿಕಾ ಮಂದಣ್ಣ ರೆಸ್ಟೊರೆಂಟ್ ಒಂದಕ್ಕೆ ತೆರಳಿದ್ದರು. ರೆಸ್ಟೊರೆಂಟ್‌ನಿಂದ ಹೊರಗೆ ಬಂದ ಕೂಡಲೇ ಅಭಿಮಾನಿಗಳು ನಟಿಯನ್ನು ಮುತ್ತಿಕೊಂಡು ಸೆಲ್ಫಿಗಾಗಿ ಮುತ್ತಿಗೆ ಹಾಕಿದರು. ಕೆಲವು ಅಭಿಮಾನಿಗಳೊಂದಿಗೆ ಫೋಸ್ ನೀಡಿದ ನಟಿ ರಶ್ಮಿಕಾ, ಜನ ಹೆಚ್ಚಾದ ಕೂಡಲೇ ನಗುತ್ತಲೇ ನಯವಾಗಿ ಅವರಿಗೆ ಬಾಯ್ ಹೇಳಿ ಕಾರ್ ಹತ್ತಿ ಹೊರಟುಹೋದರು.
PublicNext
01/09/2021 09:15 am