ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ. ಸದ್ಯ ಪ್ರಿಯಾಂಕಾ ಚೋಪ್ರಾ ಮೇಲೆ ಮತ್ತೆ ನೆಟ್ಟಿಗರು ಸಿಟ್ಟಾಗಿದ್ದಾರೆ. ಕಾರಣ ಅವರ ಲೆಟೆಸ್ಟ್ ಫೋಟೋಗಳು. ಹೌದು, ಪ್ರಿಯಾಂಕಾ ಚೋಪ್ರಾ ಕೆಂಪು ಹಾಗೂ ಕಪ್ಪು ಬಣ್ಣದ ಬಿಕಿನಿ ತೊಟ್ಟಿದ್ದು, ಅದರಲ್ಲಿ ತೆಗೆದ ಎರಡು ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಎರಡು ಚಿತ್ರಗಳಲ್ಲಿ ಒಂದು ಫೋಟೋದಲ್ಲಿ ನಿಕ್ ಜೋನಸ್ ಸಹ ಇದ್ದಾರೆ.
ಚಿತ್ರದಲ್ಲಿ ನಿಕ್ ಜೋನಸ್ ಅವರು ಪ್ರಿಯಾಂಕಾ ಮಲಗಿದ್ದರೆ, ಕಾಲಿನ ಬಳಿ ನಿಕ್ ಕುಳಿತುಕೊಂಡಿದ್ದಾರೆ. ಕೈಯಲ್ಲಿ ಫೋರ್ಕ್ ಹಾಗೂ ಚೂರಿ ಹಿಡಿದು ಪೋಸ್ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಸ್ನ್ಯಾಕ್ಸ್ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ಹಾಟ್ ಫೋಟೋ ನೋಡಿದ ನೆಟ್ಟಿಗರು ಪ್ರಿಯಾಂಕಾ ಸಂಸ್ಕಾರ ಮರೆತ್ರಾ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸಾಲದಕ್ಕೆ ಇಂತಹ ಫೋಟೋ ಹಾಕಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆಯೂ ಪ್ರಿಯಾಂಕಾ ರವಿಕೆ ಇಲ್ಲದೆ ಸೀರೆಯುಟ್ಟು ಡ್ಯಾನ್ಸ್ ಮಾಡಿದ್ದ ವಿಡಿಯೋ ಹಂಚಿಕೊಂಡಾಗಲೂ ಪ್ರಿಯಾಂಕಾ ಚೋಪ್ರಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿತ್ತು.
PublicNext
30/08/2021 04:29 pm