ಮುಂಬೈ: ಚಿತ್ರರಂಗಕ್ಕೆ ಕಾಲಿಡುವ ಮುನ್ನ ನಾನು ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಬಾಲಿವುಡ್ ಬಿಗ್‌ಬಿ ಅಮಿತಾಭ್ ಬಚ್ಚನ್ ಹೇಳಿದ್ದಾರೆ.
1979ರಲ್ಲಿ ಕಾಲಾ ಪತ್ಥರ್ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ತೆರೆ ಕಂಡು 45 ವರ್ಷಗಳಾಗಿವೆ. ಒಂದು ಘಟನೆಯನ್ನು ನೆನಪಿಸಿಕೊಳ್ಳುವ ಮೂಲಕವಾಗಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಅಮಿತಾಭ್ ನಿವೃತ್ತ ನೌಕಾ ಪಡೆಯ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಹಳೆಯದ್ದನ್ನು ಮರೆಯಲು ಗಣಿಯಲ್ಲಿ ಅವರು ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಈ ಪಾತ್ರ ಅಮಿತಾಭ್‍ಗೆ ಹೆಚ್ಚು ಕನೆಕ್ಟ್ ಆಗಿತ್ತು. 1962ರಲ್ಲಿ ಕೋಲ್ಕತ್ತಾದಲ್ಲಿ ಕಲ್ಲುಗಣಿಯಲ್ಲಿ ಕೆಲಸ ಮಾಡಿದ್ದರು ಅಮಿತಾಭ್. 7-8 ವರ್ಷಗಳ ಕಾಲ ಅವರು ಅಲ್ಲಿಯೇ ಶ್ರಮಿಸಿದ್ದರು. ಅನೇಕ ಸಂದರ್ಶನದಲ್ಲಿ ಈ ಬಗ್ಗೆ ಅವರು ಹೇಳಿಕೊಂಡಿದ್ದರು. ಈ ಕಾರಣಕ್ಕೆ ಅವರಿಗೆ ಕಾಲಾ ಪತ್ಥರ್ ಪಾತ್ರ ಹೆಚ್ಚು ಆಪ್ತವಾಗಿದೆ.
PublicNext
25/08/2021 02:06 pm