ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ.ಹಿ.ಪ್ರಾ. ಶಾಲೆ ಕಾಸರಗೋಡು ಸಿನಿಮಾದ ಪಲ್ಲವಿಯ ಹೊಸ ಫೋಟೋಶೂಟ್

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಮೂಲಕ ಖ್ಯಾತಿ ಗಳಿಸಿದ ನಟಿ ಸಪ್ತ ಪಾವೂರು ಹೊಸ ಫೋಟೋ ಶೂಟ್ ಈಗ ವೈರಲ್ ಆಗಿದೆ. ಶಾರದೆಯ ರೂಪದಲ್ಲಿ ಕಾಣಿಸಿಕೊಂಡಿರುವ ನಟಿಯ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ.

ಹಸಿರು ಬಣ್ಣದ ಸೀರೆ, ಕೆಂಪು ಕುಪ್ಪಸ, ಅದಕ್ಕೊಪ್ಪುವ ಚಂದದ ಆಭರಣ, ಮಂಗಳೂರು ಮಲ್ಲಿಗೆಯಿಂದ ಅಲಂಕರಿಸಿದ ಕೇಶ ಶೃಂಗಾರ ಅದ್ಭುತವಾಗಿ ಕಾಣಿಸಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ಗಡಿನಾಡ ವಿದ್ಯಾರ್ಥಿನಿ ಪಲ್ಲವಿ ಪಾತ್ರದಲ್ಲಿ ಸಪ್ತ ಪಾವೂರು ಅಭಿನಯಿಸಿದ್ದರು.

the_beauty._blog ಅವರೇ ಸಪ್ತಾ ಪಾವೂರು ಅವರಿಗೆ ಈ ಹೊಸ ಲುಕ್ ಕೊಟ್ಟಿದ್ದಾರೆ. ಈ ಉಡುಗೆಯಲ್ಲಿ ನಟಿ ಮುದ್ದಾಗಿ ಕಾಣಿಸಿದ್ದಾರೆ.

ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಸಪ್ತಾ ಪಾವೂರು ಫೋಟೋಶೂಟ್ ಮಾಡಲಾಗಿದೆ.

Edited By : Nirmala Aralikatti
PublicNext

PublicNext

18/08/2021 02:28 pm

Cinque Terre

68.86 K

Cinque Terre

2