ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಟ್ಟೆ ಹರಾಜಿಗಿಟ್ಟ ದೀಪಿಕಾ ; ನೆಟ್ಟಿಗರು ಛೀಮಾರಿ ಹಾಕಿದೇಕೆ?

ನಟಿ ದೀಪಿಕಾ ಪಡುಕೋಣೆ ' The Live Love Laugh Foundation' ಬೆಂಬಲಿಸುವ ಸಲುವಾಗಿ ಅವರ ಬಟ್ಟೆಗಳನ್ನು ಹರಾಜಿಗೆ ಇಡುತ್ತಿದ್ದಾರೆ. ಆ ಹರಾಜಿನಿಂದ ಬಂದ ಹಣವನ್ನು ಅವರು ಈ ಫೌಂಡೇಶನ್ ಗೆ ನೀಡಲಿದ್ದಾರೆ. ಹೀಗಾಗಿ ದೀಪಿಕಾ ಎರಡು ಕುರ್ತಾಗಳನ್ನು ಹರಾಜಿಗೆ ಇಟ್ಟಿದ್ದರು. ಆ ಬಟ್ಟೆಗಳನ್ನು ಎರಡು ದುರಂತದ ಸಂದರ್ಭದ ವೇಳೆ ಧರಿಸಿದ್ದರು. ಹೀಗಾಗಿ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.

ಒಂದು ಕುರ್ತಾವನ್ನು ನಟಿ ಜಿಯಾ ಖಾನ್ ಅವರ ಅಂತ್ಯಕ್ರಿಯೆ ವೇಳೆ ದೀಪಿಕಾ ಧರಿಸಿದ್ದರು, ಇನ್ನೊಂದು ಕುರ್ತಾವನ್ನು ನಟಿ ಪ್ರಿಯಾಂಕಾ ಚೋಪ್ರಾ ಅವರ ತಂದೆಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಹಾಕಿಕೊಂಡಿದ್ದರು. ಮದುವೆ ನಂತರವೂ ಸಿನಿಮಾದಲ್ಲಿ ಸಕ್ರಿಯವಾಗಿರುವ ನಟಿ ದೀಪಿಕಾಗೆ ಭಾರೀ ಬೇಡಿಕೆಯಿದೆ.

Edited By : Nirmala Aralikatti
PublicNext

PublicNext

18/08/2021 12:47 pm

Cinque Terre

36.03 K

Cinque Terre

2