ಬೆಂಗಳೂರು : ನೀವೊಬ್ಬರು ಐಕಾನ್, ಫಾರ್ಮಲ್ ಎಜುಕೇಶನ್ ಮುಖ್ಯವಲ್ಲ ಜ್ಞಾನ ಬಹಳ ಮುಖ್ಯ ಜ್ಞಾನದಿಂದಲೇ ವಿದ್ಯೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ರಾಜ್ ಕುಮಾರ್ ಅವರನ್ನು ಹೊಗಳಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಡಾ ರಾಜ್ ಕುಮಾರ್ ಅಕಾಡೆಮಿಯಿಂದ ಡಾ. ರಾಜ್ ಕುಮಾರ್ ಲರ್ನಿಂಗ್ ಆಪ್ ನನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಬೊಮ್ಮಾಯಿ ನಿನ್ನ ರೆಕ್ಕೆ ನಿಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತದೆ. ಮಾನಸ ಸರೋವರದಲ್ಲಿ ನಿಮ್ಮ ಪರಮಹಂಸಕ್ಕೆ, ನಿಮ್ಮ ಆ್ಯಪ್ ಗೆ ನಮ್ಮ ಅಪ್ಪಾಜಿ, ನಮ್ಮ ಅಮ್ಮ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.
ಪುನೀತ್ ರಾಜ್ ಕುಮಾರ್ ರವರು ಈ ಆ್ಯಪ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಡಾ. ರಾಜ್ ಕುಮಾರ್ ಎಂದರೆ ಒಬ್ಬ ಸಾಧಕ. ಸ್ವಾಮಿ ವಿವೇಕಾನಂದರವರು ಒಬ್ಬ ಸಾಧಕನಿಗೆ ಸಾವು ಅಂತ್ಯವಲ್ಲ ಎಂದು ಹೇಳಿದ್ದಾರೆ. ಒಬ್ಬ ಸಾಧಕ ಸಾವಿನ ನಂತರವೂ ಬದುಕಬಲ್ಲ. ನಾವು ಎಂತಹ ಶ್ರೀಮಂತ ಬದುಕನ್ನು ಬದುಕಬೇಕು ಮತ್ತು ಎಂತಹ ಮೌಲಿಕ ಬದುಕನ್ನು ಬದುಕಬೇಕು ಎಂದರೆ ಸಾವಿನ ನಂತರವೂ ನಮ್ಮ ಬದುಕಿರಬೇಕು. ಜನ ಅದನ್ನು ನೆನಪಿಸಿಕೊಳ್ಳಬೇಕು. ಅಂತವರನ್ನು ಸಾಧಕರು ಎಂದು ಕರೆಯುತ್ತಾರೆ. ಅಂತಹ ಸಾಧನೆ ಮಾಡಿರುವಂತಹ ಸ್ಟಾರ್ ಅಂದರೆ ಆಕಾಶದಲ್ಲಿರುವಂತಹ ನಕ್ಷತ್ರ ಡಾ.ರಾಜ್ಕುಮಾರ್ ಎಂದು ಹೊಗಳಿದ್ದಾರೆ.
ಇನ್ನು ರಾಜ್ ಕುಮಾರ ಕುಟುಂಬದ ಜೊತೆಗಿನ ಕೆಲವು ಘಟನೆಗಳನ್ನು ಮೆಲಕು ಹಾಕಿದರು.
PublicNext
17/08/2021 03:12 pm