ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಚ್ಚು ಕಾಮನ್ ಡಿಪಿ ರಿಲೀಸ್ : ಚಂದನವನದಲ್ಲಿ 24 ವರ್ಷ ಪೂರೈಸಿದ ಕರಿಯಾ

ಬೆಂಗಳೂರು: ಕನ್ನಡ ಸಿನಿಮಾರಂಗಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪದಾರ್ಪಣೆ ಮಾಡಿ ನಾಳೆಗೆ (ಆ.11) 24 ವರ್ಷಗಳು ತುಂಬಲಿದ್ದು, ಈ ದಿನವನ್ನು ವಿಶೇಷವಾಗಿ ಸಂಭ್ರಮಿಸುವುದಕ್ಕಾಗಿ ಇಂದು ಸಂಜೆ ಹೊಸ ಕಾಮನ್ ಡಿಪಿ ( cdp) ರಿಲೀಸ್ ಮಾಡಲಾಗಿದೆ. ಲೈಟ್ ಬಾಯ್ ಆಗಿ ಕಾಲಿಟ್ಟು ಚಂದನವನದಲ್ಲಿ ಯಜಮಾನ ಪಟ್ಟ ಅಲಂಕರಿಸಿದ ದರ್ಶನ್ ಅವರ ಸಿನಿ ಪಯಣವನ್ನು ಕಾಮನ್ ಡಿಪಿಯಲ್ಲಿ ಚಿತ್ರಿಸಲಾಗಿದೆ. ವಿಭಿನ್ನವಾಗಿ ಸಿದ್ಧಪಡಿಸಲಾದ ಈ ಲುಕ್ ನಲ್ಲಿ ದರ್ಶನ್ ಅವರು ಇದುವರೆಗೆ ನಟಿಸಿರುವ ಎಲ್ಲ ಸಿನಿಮಾಗಳ ಹೆಸರುಗಳು ಹಾಗೂ ಅವು ಬಿಡುಗಡೆಯಾದ ವರ್ಷಗಳನ್ನು ಉಲ್ಲೇಖಿಸಲಾಗಿದೆ.

ಲಕ್ಷಾಂತರ ಅಭಿಮಾನಿಗಳ ಪಾಲಿಗೆ ‘ಡಿ ಬಾಸ್’ ಅವರು ಛೇರ್ ಮೇಲೆ ಕುಳಿತಿರುವ ಫೋಟೊ ಡಿಪಿಯಲ್ಲಿ ಮತ್ತೊಂದು ಹೈಲೆಟ್ ಆಗಿದೆ. ಚಂದನವನದ ಒಡೆಯ ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳನ್ನು ಸದ್ದಿಲ್ಲದೆ ಪೂರೈಯಿಸಿದ್ದಾರೆ. ಸಾಕಷ್ಟು ಏಳು-ಬೀಳುಗಳ ನಡುವೆ ಸ್ಯಾಂಡಲ್ ವುಡ್ ನಲ್ಲಿ ಭದ್ರ ನೆಲೆ ಕಂಡುಕೊಂಡಿರುವ ವಿರಾಟ್, ಇಂದು ಟಾಪ್ ನಟರುಗಳಲ್ಲಿ ಒಬ್ಬರಾಗಿದ್ದಾರೆ.

ಮೆಜೆಸ್ಟಿಕ್, ಕರಿಯಾ, ನನ್ನ ಪ್ರೀತಿಯ ರಾಮು, ಸಂಗೋಳ್ಳಿ ರಾಯಣ್ಣ, ಕುರುಕ್ಷೇತ್ರ ಹಾಗೂ ಇತ್ತೀಚಿಗಷ್ಟೆ ತೆರೆ ಕಂಡ ರಾಬರ್ಟ್ ಸೇರಿದಂತೆ ಸುಮಾರು 52 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ದರ್ಶನ್, ಕೋಟ್ಯಂತರ ಅಭಿಮಾನಿಗಳ ಪಾಲಿಗೆ ಡಿ ಬಾಸ್ ಆಗಿದ್ದಾರೆ.

Edited By : Nirmala Aralikatti
PublicNext

PublicNext

10/08/2021 06:59 pm

Cinque Terre

48.4 K

Cinque Terre

2