ಶಿವಮೊಗ್ಗ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಅವರ ತಂಡವು ರಾಜ್ಯದ ಅನೇಕ ಶಾಲೆಗಳನ್ನು ದತ್ತು ಪಡೆದು ಅದರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇದೀಗ ಕಿಚ್ಚನ ತಂಡವು ಶಿವಮೊಗ್ಗ ಜಿಲ್ಲೆ ಶಾಲೆಯನ್ನು ದತ್ತು ಪಡೆದಿದ್ದಾರೆ.
ಜಿಲ್ಲೆಯ ಸುಮಾರು 133 ವರ್ಷ ಹಳೆಯ ಕನ್ನಡ ಶಾಲೆಯನ್ನು ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ದತ್ತು ಪಡೆದಿದೆ. ಈ ಬಗ್ಗೆ ಶಿವಮೊಗ್ಗ ಕ್ಷೇತ್ರಶಿಕ್ಷಣಾಧಿಕಾರಿಗಳು ಅನುಮೋದನೆ ನೀಡಿದ್ದಾರೆ.
ಶಿವಮೊಗ್ಗ ನಗರದ ಬಿಹೆಚ್ ರಸ್ತೆಯಲ್ಲಿರುವ ಸರ್ಕಾರಿ ಶಾಲೆಯನ್ನು ಕಿಚ್ಚ ಸುದೀಪ್ ತಂಡ ದತ್ತು ಪಡೆದಿದ್ದು, ಶಾಲೆಯನ್ನ ಅಭಿವೃದ್ಧಿ ಪಡಿಸಲು ಪಣ ತೊಟ್ಟಿದೆ. ಈಗಾಗಲೇ ನೂರಾರು ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವ ಕೆಲಸವನ್ನು ಈ ಕಿಚ್ಚ ಸುದೀಪ್ ಚಾರಿಟಬಲ್ಟ್ರಸ್ಟ್ ಮಾಡುತ್ತಿದ್ದು, ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
PublicNext
30/07/2021 11:34 am