ಬೆಂಗಳೂರು: ಬಹುನಿರೀಕ್ಷಿತ ಬಿಗ್‌ಬಾಸ್ 8ನೇ ಸೀಸನ್ ಇಂದಿನಿಂದ ಆರಂಭವಾಗಿದ್ದು, ಒಟ್ಟು 17 ಜನ ಸ್ಪರ್ಧಿಗಳು ದೊಡ್ಮನೆ ಪ್ರವೇಶ ಮಾಡಿದ್ದಾರೆ.
ನಟ ಕಿಚ್ಚ ಸುದೀಪ್ ಅವರು ಎಲ್ಲ ಸ್ಪರ್ಧಿಗಳನ್ನು ಪರಿಚಯ ಮಾಡಿಕೊಟ್ಟರು. ಬಿಗ್‌ಬಾಸ್ ತಂಡ ಈಗಾಗಲೇ ಪ್ರಕಟಿಸಿರುವಂತೆ ಈ ಆವೃತ್ತಿಯಲ್ಲಿ ಸೆಲೆಬ್ರಿಟಿಗಳೇ ಇದ್ದಾರೆ. ಟಿಕ್‌ಟಾಕ್ ನಟಿ ಧನುಶ್ರೀ, ನಟಿಯರಾದ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ಮಜಾ ಭಾರತ ಖ್ಯಾತಿಯ ಮಂಜು ಪಾವಗಡ, ಯುಟ್ಯೂಬರ್ ಶಮಂತ್ ಗೌಡ (ಬ್ರೋ ಗೌಡ), ಬ್ರಹ್ಮಗಂಟು ಧಾರಾವಾಹಿಯ ನಟಿ ಗೀತಾ ಭಾರತಿ ಭಟ್, ಹಾಸ್ಯಮಯ ವಿಡಿಯೋ ತುಣುಕುಗಳಿಂದ ಖ್ಯಾತರಾಗಿರುವ ರಾಘು (ರಘು ವೈನ್ ಸ್ಟೋರ್), ಪುಟ್ಟಗೌರಿ ಮದುವೆಯ ‘ಅಜ್ಜಮ್ಮ’ ಖ್ಯಾತಿಯ ಚಂದ್ರಕಲಾ ಮೋಹನ್, ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಮಾಡಿದ, ಡ್ರಗ್ಸ್ ಪ್ರಕರಣದ ಹಲವು ಸುಳಿವುಗಳನ್ನು ಹೊರಹಾಕಿದ ಪ್ರಶಾಂತ್ ಸಂಬರಗಿ, ‘ತಲ್ಲಣ’ ಖ್ಯಾತಿಯ ನಟಿ ನಿರ್ಮಲಾ ಚನ್ನಪ್ಪ, ಕ್ರಿಕೆಟ್ ಲೀಗ್ ಪ್ಲೇಯರ್ ರಾಜೀವ್, ಹಿರಿಯ ನಟ ಶಂಕರ್ ಅಶ್ವತ್ಥ್ ಈಗಾಗಲೇ ದೊಡ್ಮನೆ ಪ್ರವೇಶ ಮಾಡಿದ್ದಾರೆ.
PublicNext
28/02/2021 11:05 pm