ಸೌತ್ ನಟಿ ಸಾಯಿ ಪಲ್ಲವಿ ಫಿದಾ ನಂತರ ಮತ್ತೊಮ್ಮೆ ಹಳ್ಳಿ ಹುಡುಗಿಯ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಕ್ಯೂಟ್ ಲುಕ್ ವೈರಲ್ ಆಗಿದೆ. ನಾಗ ಚೈತನ್ಯ ಅಕ್ಕಿನೇನಿ ಮತ್ತು ಸಾಯಿ ಪಲ್ಲವಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಲವ್ ಸ್ಟೋರಿ ಏಪ್ರಿಲ್ 16 ರಂದು ತೆರೆ ಕಾಣಲಿದೆ. ಇದೇ ಮೊದಲ ಬಾರಿ ನಾಗಚೈತನ್ಯ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ ಸಾಯಿ ಪಲ್ಲವಿ.
ನಟಿ ಸಾಯಿ ಪಲ್ಲವಿ ಈ ಮೊದಲು ಫಿದಾ ಸಿನಿಮಾದಲ್ಲಿ ಕಾಣಿಸಿಕೊಂಡಂತೆ ಈ ಬಾರಿಯೂ ದಾವಣಿ ಲುಕ್ ನಲ್ಲಿ ಕಂಗೋಳಿಸಿದ್ದಾರೆ. ತಿಳಿ ಹಸಿರು, ತಿಳಿ ಕೇಸರಿ ಬಣ್ಣದ ಲಂಗ ದಾವಣಿ ಧರಿಸಿರೋ ಸಾಯಿ ಪಲ್ಲವಿ ಡ್ಯಾನ್ಸ್ ಮಾಡಿ ಸಿನಿ ರಸಿಕರ ಮನ ತಣಿಸಿದ್ದಾರೆ.
PublicNext
28/02/2021 05:02 pm