ನಟ ಚಿರಂಜೀವಿ ಸರ್ಜಾ ನಟನೆಯ ರಾಜಮಾರ್ತಾಂಡ ಸಿನಿಮಾದ ಟ್ರೈಲರ್ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ. ಚಿರು ಇಲ್ಲದಿದ್ದರೂ ಅವರ ಸಿನಿಮಾಗಳ ಮೇಲಿನ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಸದ್ಯ ರಿಲೀಸ್ ಗೆ ರೆಡಿಯಾಗಿರುವ ರಾಜಮಾರ್ತಾಂಡ ಸಿನಿಮಾ ಮೇಲೆಯೂ ನಿರೀಕ್ಷೆ ಹೆಚ್ಚಾಗಿದೆೆ. ವಿಶೇಷ ಎಂದರೆ ರಾಜಮಾರ್ತಂಡ ಸಿನಿಮಾದ ಟ್ರೈಲರ್ ಅನ್ನು ವಿಶೇಷ ಅತಿಥಿಯೊಬ್ಬರು ಬಿಡುಗಡೆ ಮಾಡುತ್ತಿದ್ದಾರೆ. ಆ ಸ್ಪೆಷಲ್ ಗೆಸ್ಟ್ ಮತ್ಯಾರೂ ಅಲ್ಲ ಚಿರಂಜೀವಿ ಮತ್ತು ಮೇಘನಾ ರಾಜ್ ಪುತ್ರ ಜೂ.ಚಿರು. ಪುಟ್ಟ ಪೋರ ಜೂ ಚಿರು ಅಪ್ಪನ ಸಿನಿಮಾದ ಟ್ರೈಲರ್ ಅನ್ನು ರಿಲೀಸ್ ಮಾಡುತ್ತಿರುವುದು ವಿಶೇಷವಾಗಿದೆ.
ನಾಳೆ ಫೆಬ್ರವರಿ 19ಕ್ಕೆ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಈ ಬಗ್ಗೆ ಸ್ವತಃ ಮೇಘನಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 'ಎಲ್ಲಾ ಅವನ ತಂದೆಗಾಗಿ. ಅಪ್ಪನ ಏಂಜಲ್, ರಾಜಮಾರ್ತಾಂಡ ಟ್ರೈಲರ್ ಅನ್ನು ನನ್ನ ಮಗ ನಾಳೆ ಬಿಡುಗಡೆ ಮಾಡಲಿದ್ದಾನೆ' ಎಂದು ಹೇಳಿದ್ದಾರೆ.
PublicNext
18/02/2021 05:35 pm