ಅಭಿಮಾನಿಗಳ ದಾಸ... ಚಾಲೆಂಜಿಂಗ್ ಸ್ಟಾರ್... ಸ್ಯಾಂಡಲ್ ವುಡ್ ಡಿಬಾಸ್ ದರ್ಶನ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳಿಗೆ ದರ್ಶನ್ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ. ಹೌದು, ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಟ್ರೇಲರ್ ಅನ್ನು ಫ್ಯಾನ್ಸ್ ಗೆ ತಮ್ಮ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದಾರೆ.
ಅಭಿಮಾನಿಗಳು ರಾಬರ್ಟ್ ಟ್ರೇಲರ್ ಗಾಗಿ ಕಾತರದಿಂದ ಕಾಯುತ್ತಿದ್ದರು. ತರುಣ್ ಸುಧೀರ್ ನಿರ್ದೇಶನದ ಹಾಗೂ ಉಮಾಪತಿ ಅವರು ಹಣ ಹೂಡಿರುವ ರಾಬರ್ಟ್ ಸಿನಿಮಾ ಮಾರ್ಚ್ 11ಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
PublicNext
16/02/2021 10:25 am