ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.
ಹೌದು. ಮೊದಲ ಬಾಯ್ಫ್ರೆಂಡ್ ಮಿಶಾಲ್ ಕೃಪಲಾನಿ ಜೊತೆ ಬ್ರೇಕಪ್ ಆದ ನಂತರ ಈಗ ಮತ್ತೊಬ್ಬ ಗೆಳೆಯ ಜೊತೆ ಡೇಟಿಂಗ್ ನಡೆಸಿದ್ದಾರೆ. ಈ ವಿಚಾರವನ್ನು ಸ್ವತಃ ಇರಾ ಖಾನ್ ರಿವೀಲ್ ಮಾಡಿದ್ದಾರೆ.
ಇರಾ ಖಾನ್ ತಮ್ಮ ಫಿಟ್ನೆಸ್ ಕೋಚ್ ಆಗಿರುವ ನುಪುರ್ ಶಿಖರೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಜೊತೆಗೆ ಸಮಾಜಿಕ ಜಾಲತಾಣದಲ್ಲಿ ಹೊಸ ಬಾಯ್ಫ್ರೆಂಡ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲಾಕ್ಡೌನ್ನಲ್ಲಿ ಈ ಜೋಡಿ ಹತ್ತಿರವಾಗಿದ್ದು, ಈಗ ಡೇಂಟಿಗ್ ಮಾಡುತ್ತಿದ್ದಾರಂತೆ. ಇರಾ ಸದ್ಯ ನುಪುರ್ ಜೊತೆ ಸುತ್ತಾಡುತ್ತಿದ್ದು, ಅವರ ಜೊತೆಗಿನ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ.
PublicNext
11/02/2021 09:36 pm