ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಬಹು ನಿರೀಕ್ಷಿತ ಸಿನಿಮಾ ರಾಬರ್ಟ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಒಂದೇ ದಿನ ಚಿತ್ರ ತೆರೆ ಕಾಣಲಿದೆ. ತೆಲುಗು ಸಿನಿಮಾದ ಪ್ರಚಾರಕ್ಕಾಗಿ ಹೈದರಾಬಾದಿಗೆ ತೆರಳಲಿರುವ ದರ್ಶನ್, ಅದಕ್ಕೂ ಮುಂಚೆ ತಿರುಪತಿಗೆ ಭೇಟಿ ಕೊಟ್ಟಿದ್ದು, ತಿಮ್ಮನ ಆಶೀರ್ವಾದ ಪಡೆದಿದ್ದಾರೆ.
ದರ್ಶನ್ ತಮ್ಮ ರಾಬರ್ಟ್ ಚಿತ್ರತಂಡದ ಸದಸ್ಯರೊಂದಿಗೆ ತಿರುಪತಿಗೆ ಭೇಟಿ ನೀಡಿದ್ದಾರೆ. ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ, ಶ್ರೀಧರ್ ಸೇರಿದಂತೆ ಇರರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ದರ್ಶನ್ ತೂಗುದೀಪ.ಹೈದರಾಬಾದಿನಲ್ಲಿ ರಾಬರ್ಟ್ ತೆಲುಗು ಅವತರಣಿಕೆಯ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ರಾಬರ್ಟ್ ಸಿನಿಮಾ ಮಾರ್ಚ್ 11ರಂದು ಕನ್ನಡ ಹಾಗೂ ತೆಲುಗಿನಲ್ಲಿ ತೆರೆ ಕಾಣಲಿದೆ.
PublicNext
10/02/2021 01:27 pm