ವಿಶ್ವ ಸುಂದರಿ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಿಂದ ಹಾಲಿವುಡ್‌ವರೆಗೂ ಸಾಕಷ್ಟು ಹೆಸರು ಮಾಡಿದ್ದಾರೆ. ಸದ್ಯ ಅವರು ‘ಅಪೂರ್ಣ (ಅನ್‌ಫಿನಿಷ್ಡ್)’ ಆತ್ಮಕಥೆ ಬಿಡುಗಡೆಗೆ ಮಾಡಿದ್ದಾರೆ. ಇದಕ್ಕೂ ಮುನ್ನವೇ ಅದರಲ್ಲಿನ ಕೆಲವು ಅಧ್ಯಾಯಗಳ ಬಗ್ಗೆ ಮಾಹಿತಿ ಬಹಿರಂಗ ಆಗಿದೆ.
ತಮ್ಮ ಸ್ತನ, ಸೇರಿದಂತೆ ಮುಂತಾದ ದೇಹದ ಅಂಗಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ನಿರ್ದೇಶಕನ ಬಗ್ಗೆಯೂ ಪ್ರಿಯಾಂಕಾ ಬರೆದುಕೊಂಡಿದ್ದಾರೆ. 2002ರಲ್ಲಿ ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಬಳಿಕ ಸಿನಿಮಾ ಕ್ಷೇತ್ರದಲ್ಲಿ ಮಿಂಚಬೇಕು ಎಂದುಕೊಳ್ಳುತ್ತಿದ್ದರು. ಆಗ ಒಬ್ಬ ನಿರ್ದೇಶಕನನ್ನು ಅವರು ಭೇಟಿ ಆಗಿದ್ದರು. ಈ ಸಂದರ್ಭದಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಪ್ರಿಯಾಂಕಾ ಈಗ ಬಾಯಿ ಬಿಟ್ಟಿದ್ದಾರೆ.
ಘಟನೆಯನ್ನು ವಿವರಸಿರುವ ಪ್ರಿಯಾಂಕಾ, ''ಒಂದು ಸುತ್ತಿನ ಸಣ್ಣ ಮಾತುಕತೆ ಬಳಿಕ ಆತ ನನಗೆ ಎದ್ದು ನಿಲ್ಲುವಂತೆ ಹೇಳಿದ. ತುಂಬ ಹೊತ್ತು ನನ್ನನ್ನು ನೋಡಿ ಏನೋ ಅಂದಾಜಿಸಿದ. ನಂತರ ಸ್ತನಗಳ ಗಾತ್ರ ಹೆಚ್ಚಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ. ನಟಿಯಾಗಬೇಕು ಎಂದರೆ ದೇಹದ ಇತರೆ ಅಂಗಗಳ ಗಾತ್ರವನ್ನೂ ಸರಿಪಡಿಸಿಕೊಳ್ಳಬೇಕು. ಲಾಸ್ ಏಂಜಲೀಸ್‌ನಲ್ಲಿ ತನಗೊಬ್ಬ ವೈದ್ಯರು ಗೊತ್ತು. ಅವರನ್ನು ಬೇಕಾದರೆ ಕಳಿಸಿಕೊಡುತ್ತೇನೆ ಅಂತ ಅವನು ಹೇಳಿದ' ಎಂಬ ಶಾಕಿಂಗ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಘಟನೆಯಿಂದಾಗಿ ಪ್ರಿಯಾಂಕಾ ಅವರು ಕುಗ್ಗಿ ಹೋದರಂತೆ. ಅಂಥ ನಿರ್ದೇಶಕನ ಬಳಿ ಕರೆದುಕೊಂಡ ಹೋದ ಮ್ಯಾನೇಜರ್‌ನನ್ನು ಮೊದಲು ಕೆಲಸದಿಂದ ತೆಗೆದು ಹಾಕಿದರು. ಆಮೇಲೆ ಪ್ರಿಯಾಂಕಾ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತ ಬಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದು ಈಗ ಇತಿಹಾಸ. ಇಂಥ ಹಲವು ಘಟನೆಗಳನ್ನು ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.
PublicNext
09/02/2021 03:40 pm