ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿಯಾ ಸಿನಿಮಾಗೆ ಒಂದು ವರ್ಷ: ಸಂಭ್ರಮದಲ್ಲಿ ಚಿತ್ರ ತಂಡ

ಕನ್ನಡದ ಪ್ರೇಮ ಕಥಾನಕದ ಚಿತ್ರಗಳಲ್ಲಿ ಬಹು ಡಿಫ್ರೆಂಟ್ ಸ್ಟೋರಿ ಎನಿಸಿಕೊಂಡಿದ್ದ ಇತ್ತೀಚಿನ ಸಿನೆಮಾ ಅಂದ್ರೆ 'ದಿಯಾ'. ಸ್ಯಾಂಡಲ್ ವುಡ್ ನಲ್ಲಿ ಕಳೆದ ವರ್ಷ, 2020ರಲ್ಲಿ ರಿಲೀಸ್ ಆದ ಈ ಸಿನಿಮಾ ಹೃದಯವಂತರ ಹೃದಯ ಗೆಲ್ಲುವಲ್ಲಿ ಸಕ್ಸಸ್ ಆಗಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರೊಮ್ಯಾಂಟಿಕ್ ಫೀಲ್ ಇರುವ ಸಿನಿಮಾಗೆ ಚಿತ್ರಪ್ರೇಕ್ಷಕರು ಫಿದಾ ಆಗಿದ್ದಾರೆ. ಚಿತ್ರಮಂದಿರಗಳ ಸಮಸ್ಯೆಯ ನಡುವೆಯೂ ದಿಯಾ ಗೆಲುವಿನ ನಗೆ ಬೀರಿತ್ತು.

ದಿಯಾ, ಆದಿ ಮತ್ತು ರೋಹಿತ್ ಪಾತ್ರಗಳು ಇನ್ನು ಪ್ರೇಕ್ಷಕರನ್ನು ಕಾಡುತ್ತಿದ್ದು, ನೋಡುಗರ ಮನದಲ್ಲಿ ಹಸಿರಾಗೆ ಇದೆ. ಚಿತ್ರದಲ್ಲಿ ನಟ ದೀಕ್ಷಿತ್ ಶೆಟ್ಟಿ ಮತ್ತು ಪೃಥ್ವಿ ಅಂಬರ್ ನಾಯಕರಾಗಿ ಕಾಣಿಸಿಕೊಂಡರೇ, ನಾಯಕಿಯಾಗಿ ಖುಷಿ ರವಿ ಮಿಂಚಿದ್ದಾರೆ. ದಿಯಾ ಸಿನಿಮಾ ಅಶೋಕ್ ಸಾರಥ್ಯದಲ್ಲಿ ಮೂಡಿಬಂದಿದೆ.

Edited By : Nagaraj Tulugeri
PublicNext

PublicNext

08/02/2021 03:48 pm

Cinque Terre

44.88 K

Cinque Terre

0

ಸಂಬಂಧಿತ ಸುದ್ದಿ