ಕನ್ನಡ ಕಿರುತೆರೆಯ ಖ್ಯಾತ ನಟಿ ಗೀತಾ ಭಾರತಿ ಸದ್ಯ ಧಾರಾವಾಹಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಧಾರಾವಾಹಿ ಜೊತೆಗೆ ಗೀತಾ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸುದೀಪ್ ನಟನೆಯ ಅಂಬಿ ನಿಂಗ್ ವಯಸ್ಸಾಯ್ತೋ ಮತ್ತು ಲವ್ ಮಾಕ್ ಟೇಲ್ ಸಿನಿಮಾಗಳಲ್ಲಿ ನಟಿಸುವ ಮೂಲಕ ದೊಡ್ಡ ಪರದೆ ಮೇಲು ಮಿಂಚಿದ್ದಾರೆ.
ಇತ್ತೀಚಿಗೆ ಲವ್ ಮಾಕ್ ಟೇಲ್ ಸಿನಿಮಾ ಮೂಲಕ ಕನ್ನಡ ಚಿತ್ರಾಭಿಮಾನಿಗಳ ಮನಗೆದಿದ್ದ ಗೀತಾ ಇದೀಗ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಗೀತಾ ಚೊಚ್ಚಲ ತೆಲುಗು ಸಿನಿಮಾದಲ್ಲಿ ಸ್ಟಾರ್ ನಟಿ ಜೊತೆ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಗೀತಾ ನಟಿಸಿದ್ದು ಲವ್ ಮಾಕ್ ಟೇಲ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ. ಕನ್ನಡದ ಲವ್ ಮಾಕ್ ಟೇಲ್ ನಲ್ಲಿ ಕಾಣಿಸಿಕೊಂಡಿದ್ದ ಪಾತ್ರದಲ್ಲೇ ಗೀತಾ ತೆಲುಗಿನಲ್ಲೂ ಮಿಂಚಿದ್ದಾರೆ.
PublicNext
05/02/2021 10:06 pm