ಕೊರೊನಾ ಅನ್‌ಲಾಕ್ ನಂತರ ಚಿತ್ರಮಂದಿರಗಳು ಶೇ 50 ಪ್ರೇಕ್ಷಕರಿಗೆ ಮಾತ್ರವೇ ಸಿನಿಮಾ ವೀಕ್ಷಿಸಲು ಅವಕಾಶ ನೀಡಬೇಕು ಎಂಬ ನಿಯಮವನ್ನು ಕೇಂದ್ರ ಸರ್ಕಾರ ವಿಧಿಸಿತ್ತು. ಈಗ ಈ ನಿಯಮವನ್ನು ಕೇಂದ್ರ ಹಿಂಪಡೆಯುತ್ತಿದೆ. ಕೇಂದ್ರ ಗೃಹ ಸಚಿವಾಲಯ ನೀಡಿರುವ ಸೂಚನೆಯಂತೆ, ಚಿತ್ರಮಂದಿರಗಳು ತಮ್ಮ ಪೂರ್ಣ ಸೀಟು ಸಾಮರ್ಥ್ಯದಷ್ಟು ಪ್ರೇಕ್ಷಕರಿಗೆ ಒಮ್ಮೆಲೆ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಬಹುದಾಗಿದೆ.
ಪೂರ್ಣ ಸೀಟು ಸಾಮರ್ಥ್ಯದಷ್ಟು ಪ್ರೇಕ್ಷಕರಿಗೆ ಸಿನಿಮಾ ನೀಡಲು ಅವಕಾಶ ನೀಡುವ ಬಗ್ಗೆ ಪ್ರತ್ಯೇಕ ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಅನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಬಿಡುಗಡೆ ಮಾಡಲಾಗುವುದು ಎಲ್ಲ ಚಿತ್ರಮಂದಿರಗಳು ಅದನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ ಎಂದಿದೆ ಕೇಂದ್ರ ಗೃಹ ಸಚಿವಾಲಯ.
PublicNext
27/01/2021 10:58 pm