ಇಷ್ಟು ದಿನ ಸಿನಿಮಾಗಳಿಲ್ಲದೇ ಬಿಕೋ ಎನ್ನುತ್ತಿದ್ದ ಚಿತ್ರಮಂದಿರಗಳಿಗೆ ಹಳೆಯ ಕಳೆ ನಿಧಾನಕ್ಕೆ ಮರಳುತ್ತಿದೆ. ಒಬ್ಬರಾದ ಬಳಿಕ ಒಬ್ಬ ಸ್ಟಾರ್ ನಟರು ತಮ್ಮ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸುತ್ತಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್, ಪುನೀತ್ ರ 'ಯುವರತ್ನ' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಬಳಿಕ ಇದೀಗ ಧೃವ ಸರ್ಜಾ ತಮ್ಮ 'ಪೊಗರು' ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.
ಇಂದು (ಜನವರಿ 18) ರಂದು ಫೇಸ್‌ಬುಕ್ ಲೈವ್ ಬಂದ ಧ್ರುವ ಸರ್ಜಾ, ತಮ್ಮ ನಟನೆಯ 'ಪೊಗರು' ಸಿನಿಮಾ ಫೆಬ್ರವರಿ 19 ರ ರಥಸಪ್ತಮಿಯಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಿದ್ದಾರೆ.
'ಪೊಗರು ಸಿನಿಮಾವು ಫೆಬ್ರವರಿ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದ್ದು, ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಿಗೆ ಬಂದು ಚಿತ್ರಮಂದಿರದಲ್ಲಿಯೇ ಸಿನಿಮಾ ನೋಡಬೇಕು' ಎಂದು ಮನವಿ ಮಾಡಿದ್ದಾರೆ ಧ್ರುವ ಸರ್ಜಾ.
PublicNext
18/01/2021 08:10 pm