ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೇವಲ ಅಭಿನಯದಲ್ಲಿ ಮಾತ್ರ ಸ್ಟಾರ್ ಆಗಿರದೆ ತಾವೊಬ್ಬ ಸಿಂಪಲ್ ಮ್ಯಾನರಿಸಂ ಮನುಷ್ಯ ಎಂಬುದನ್ನು ಅವರ ಕಾರ್ಯಗಳಿಂದ ಸಾಬೀತು ಮಾಡುತ್ತಲೇ ಇರುತ್ತಾರೆ.
ಈ ಕಾರಣದಿಂದಲೇ ಸ್ಯಾಂಡಲ್ವುಡನಲ್ಲಿ ನಟ ದರ್ಶನ ಅವರು ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದರೇ ತಪ್ಪಾಗಲಾರದು, ಅದರಂತೆ ಪ್ರಾಣಿಗಳೆಂದರೂ ದರ್ಶನ ಅವರಿಗೆ ಅಚ್ಚು ಮೆಚ್ಚು ಎಂಬುದೂ ಎಲ್ಲರಿಗೂ ಗೊತ್ತಿರುವ ವಿಚಾರ, ಕಳೆದ ವರ್ಷ 2019ರಲ್ಲಿ ಧಾರಾವಾಡಕ್ಕೆ ಆಗಮಿಸಿದ ದರ್ಶನ್ ಮಾಜಿ ಶಾಸಕ ವಿನಯ ಕುಲಕರ್ಣಿ ಫಾರ್ಮ್ ಹೌಸ್ ನಲ್ಲಿ ಭರ್ಜರಿ ಚಕ್ಕಡಿ ಸವಾರಿ ಮಾಡಿ ಅಭಿಮಾನಿಗಳನ್ನು ಹುಬ್ಬೆರಿಸುವಂತೆ ಮಾಡಿದ್ದರು.
ಅದರಂತೆ ಹೊಸ ವರ್ಷದ ಮೊದಲ ಸುಗ್ಗಿ ಹಬ್ಬ ಸಂಕ್ರಾಂತಿ ನಿಮಿತ್ತ ಪಕ್ಕಾ ಹಳ್ಳಿ ಸೊಬಗಿನಂತೆ ತಮ್ಮ ಫಾರ್ಮ್ ಹೌಸ್ ಒಳಗೆ ಸಾಕಿರುವ ಕುದರೆ, ಹೋರಿಗಳನ್ನು ಕಿಚ್ಚು ಹಾಯಿಸಿದ್ದಾರೆ. ಆ ದೃಶ್ಯಗಳನ್ನು ಸಾಂಡಲ್ವುಡ್ ಸಿನಿಮಾ ಪೇಜ್ ಒಂದು ಪ್ರಕಟಿಸಿದ್ದು, ನಟ ದರ್ಶನ್ ಮತ್ತೆ ನಮ್ಮತನ ಮೆರೆದು ಅಭಿಮಾನಿಗಳ ಪ್ರೀತಿ ಸ್ನೇಹ ಗೆದ್ದಿದ್ದಾರೆ.
PublicNext
15/01/2021 12:23 pm