ಮುಂಬೈ: ಇತ್ತೀಚೆಗೆ ಬೃಹತ್ ಮೊತ್ತ ಅಂದ್ರೆ ಬರೋಬ್ಬರಿ 39 ಕೋಟಿಯ ಅಪಾರ್ಟ್ ಮೆಂಟ್ ಖರಿದಿಸಿ ಸುದ್ದಿಯಾಗಿದ್ದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಇದೀಗ ಬೆಲ್ಲಿ ಡ್ಯಾನ್ಸ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಭಾರತೀಯ ಚಿತ್ರರಂಗದ ಖ್ಯಾತ ನಟಿ ಶ್ರೀದೇವಿ ಅದ್ಬುತ ನೃತ್ಯಗಾರ್ತಿಯೂ ಹೌದು. ತಾಯಿಯ ನೃತ್ಯ ಕೌಶಲ್ಯಗಳನ್ನು ಬಳುವಳಿಯಾಗಿ ಪಡೆದ ರೀತಿ ಪುತ್ರಿ ಜಾಹ್ನವಿ ಕಪೂರ್ ಹೆಜ್ಜೆ ಹಾಕಿದ್ದಾರೆ.
ಸದ್ಯ ಇನ್ ಸ್ಟಾಗ್ರಾಂ ನಲ್ಲಿ ಜಾಹ್ನವಿ ನೃತ್ಯದ ವಿಡಿಯೋವೊ ವೈರಲ್ ಆಗಿದ್ದು ಅಶೋಕ ಚಿತ್ರದ ಸನ್ ಸನನಾ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮೂಲಕ ಸೊಂಟ ಬಳಕಿಸಿದ್ದಾರೆ.
ಹಾಡಿಗೆ ತಕ್ಕಂತೆ ಮನೋಹರವಾಗಿ ನೃತ್ಯ ಮಾಡಿರುವ ಜಾಹ್ನವಿ, ಬೆಲ್ಲಿ ಡ್ಯಾನ್ಸ್ ನ ತಾಂತ್ರಿಕ ಅಂಶಗಳಲ್ಲಿ ತನ್ನ ಪರಿಪೂರ್ಣತೆಯನ್ನು ಪ್ರದರ್ಶಿಸಿದ್ದಾರೆ.
ಬಿಳಿ ಉಡುಪನ್ನು ತೊಟ್ಟು ಜಾಹ್ನವಿ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ.
PublicNext
13/01/2021 10:17 am