ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಮನೆ ತುಂಬಾ ಮಕ್ಕಳನ್ನು ಪಡೆಯುವ ಆಸೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.
'ನಾನು ಮಕ್ಕಳನ್ನು ಪಡೆಯಲು ಬಯಸುತ್ತೇನೆ. ಎಷ್ಟು ಸಾಧ್ಯವೋ ಅಷ್ಟು' ಎಂದು ಹೇಳಿದ್ದು, ಎಷ್ಟು ಮಕ್ಕಳು ಬೇಕು ಎಂದು ಕೇಳಿದ ಪ್ರಶ್ನೆಗೆ ಪ್ರಿಯಾಂಕಾ 'ಕ್ರಿಕೆಟ್ ಟೀಂ ಕಟ್ಟುವಷ್ಟು' ಎಂದಿದ್ದಾರೆ.
ಗಾಯಕ ನಿಕ್ ಜೋನಸ್ ಜತೆ ಸುಖ ಸಂಸಾರ ನಡೆಸುತ್ತಿರುವ ನಟಿ ತಮ್ಮ ಹೊಂದಾಣಿಕೆ ಕುರಿತು ಮಾತನಾಡುತ್ತಾ 'ಭಾರತಕ್ಕೆ ಬರಬೇಕು ಎಂದಾಗಲೆಲ್ಲ ನಿಕ್ ನೀರಿನಲ್ಲಿ ಇರುವ ಮೀನಿನಂತೆ ಕರೆದುಕೊಂಡು ಬರುತ್ತಾರೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡರೆ ಇಬ್ಬರ ನಡುವೆ ಸಮಸ್ಯೆ ಇರುವುದಿಲ್ಲ' ಎಂದಿದ್ದಾರೆ.
ಕೊರೊನಾ ಕ್ವಾರಂಟೈನ್ ನಿಂದಾಗಿ 'ನಮಗೆ ಒಟ್ಟಿಗೆ ಸಮಯ ಕಳೆಯಲು ಸಾಧ್ಯವಾಯಿತು. ನಿಜಕ್ಕೂ ಒಂದು ರೀತಿಯಲ್ಲಿ ಒಳ್ಳೆಯದಾಯಿತು.
ಇಬ್ಬರ ವೃತ್ತಿ ಜೀವನದಲ್ಲಿ ಒಟ್ಟಿಗೆ ಸಮಯ ಕಳೆಯಲು ಅವಕಾಶ ಸಿಗುವುದೇ ತೀರಾ ಕಡಿಮೆ' ಎಂದು ಹೇಳಿದ್ದಾರೆ.
PublicNext
12/01/2021 04:29 pm