ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಬಾನಿ ಮೇಲೆ ದಚ್ಚು ಕಿಚ್ಚು: 5ಜಿ ದೊಡ್ಡ ಹಗರಣ ಇರಬಹುದೆಂದ ರಾಬರ್ಟ್

ಉದ್ಯಮಿ ಅಂಬಾನಿ 5ಜಿ ನೆಟ್‌ವರ್ಕ್‌ ಲಾಂಚ್ ಮಾಡುತ್ತಿದ್ದಾರೆ. ಇದು ದೊಡ್ಡ ಹಗರಣ ಎಂದು ನನಗೆ ಅನಿಸುತ್ತಿದೆ. 5ಜಿ ಓಡಬೇಕು ಎಂದರೆ ಒಟಿಟಿ ಸಿನಿಮಾಗಳು, ಆನ್‌ಲೈನ್‌ ಸಿನಿಮಾಗಳು ಇರಬೇಕು. ಆಗಲೇ ಅವರಿಗೆ ದುಡ್ಡು. ಅದೇ ಚಿತ್ರಮಂದಿರಗಳು ತೆರೆದುಬಿಟ್ಟರೆ ಒಟಿಟಿಗಳ ಮಾರುಕಟ್ಟೆ ಕುಸಿಯುತ್ತದೆ. ಹಾಗಾಗಿ ಅಂಬಾನಿ ಕೆಲವು ದೊಡ್ಡ-ದೊಡ್ಡವರಿಗೆ ಹೇಳಿ ಚಿತ್ರಮಂದಿರಗಳಿಗೆ ಅವಕಾಶ ನಿರಾಕರಿಸಿರಬಹುದು ಎಂದು ಛಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

ಚಿತ್ರಮಂದಿರಗಳಲ್ಲಿ ಈಗ 50% ಪ್ರೇಕ್ಷಕರಿಗೆ ಅಷ್ಟೇ ಅವಕಾಶ ನೀಡಬೇಕು ಎಂದು ನಿಯಮ ಮಾಡಲಾಗಿದೆ. ಒಂದು ವೇಳೆ ಅದನ್ನು 25% ಇಳಿಸಿದರೂ ಸರಿಯೇ ನನ್ನ ಸಿನಿಮಾವನ್ನು ನಾನು ಚಿತ್ರಮಂದಿರಲ್ಲಿಯೇ ಬಿಡುಗಡೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು ನಟ ದರ್ಶನ್.

Edited By : Nagaraj Tulugeri
PublicNext

PublicNext

10/01/2021 10:27 pm

Cinque Terre

91.85 K

Cinque Terre

26