ಮುಂಬೈ: ಹಿಂದಿ ಬಿಗ್‌ಬಾಸ್ ಸೀಸನ್ 14ರಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ಕಿರಿಕ್ ಮುಂದುವರಿದಿದೆ. ಈ ಬಾರಿ ಸಾವಂತ್ ಸ್ಪರ್ಧಿ ರಾಹುಲ್ ಮಹಾರಾಜ್ ಅವರನ್ನ ಬೆತ್ತಲಾಗಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಗ್‌ಬಾಸ್ ಸೀಸನ್ 14ರ ಮುಂಬರುವ ಎಪಿಸೋಡ್‌ನ ಪ್ರೋಮೋದಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ಅವರು ಸ್ಪರ್ಧಿ ರಾಹುಲ್ ಮಹಾಜನ್ ಅವರ ಬಟ್ಟೆಗಳನ್ನು ಹರಿದು ಹಾಕುವುದನ್ನು ಕಾಣಬಹುದಾಗಿದೆ. ಬಳಿಕ ರಾಹುಲ್ ಟವೆಲ್ ಸುತ್ತಿಕೊಂಡಿದ್ದಾರೆ. ರಾಹುಲ್ ವೈದ್ಯ ಮತ್ತು ಅಲಿ ಗೋನಿ ಸೇರಿದಂತೆ ಇತರ ಸ್ಪರ್ಧಿಗಳು ರಾಖಿ ಸಾವಂತ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೆ ಮತ್ತೊಬ್ಬ ಸ್ಪರ್ಧಿ ಆಲಿ, "ಇದೇ ಘಟನೆ ಮಹಿಳೆಯೊಂದಿಗೆ ಸಂಭವಿಸಿದರೆ ಏನು ಗತಿ" ಪ್ರಶ್ನಿಸಿದ್ದನ್ನು ಪ್ರೋಮೋದಲ್ಲಿ ಕಾಣಬಹುದಾಗಿದೆ.
PublicNext
30/12/2020 03:51 pm