ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2ನೇ ಗೆಳತಿಯ ಮನೆಗೆ ಹೋದ ಕಿಚ್ಚ ಸುದೀಪ್:ಸವಿ ಸವಿ ನೆನಪು

ಸುದೀಪ್ ನಾಯಕನಾಗಿ ನಟಿಸಿದ್ದ ಮೈ ಆಟೋಗ್ರಾಫ್ ಚಿತ್ರದಲ್ಲಿ ಎರಡನೇ ನಾಯಕಿ ಲತಿಕಾ. ಲತಿಕಾ ಅವರ ದೃಶ್ಯಗಳು ಕೇರಳದಲ್ಲಿ ನಡೆಯುತ್ತದೆ. ಆ ಚಿತ್ರದಲ್ಲಿ ಲತಿಕಾ ಅವರ ಮನೆಯಾಗಿದ್ದ ಸ್ಥಳಕ್ಕೆ ಈಗ ಸುದೀಪ್ ಹೋಗಿದ್ದಾರೆ. ಸುಮಾರು ಹದಿನೈದು ವರ್ಷದ ನಂತರ ಈ ಮನೆಗೆ ಭೇಟಿ ನೀಡಿರುವ ಸುದೀಪ್ ಎಲ್ಲೆಲ್ಲಿ ಯಾವ ಸೀನ್ ಶೂಟಿಂಗ್ ಎಂದು ನೆನಪಿಸಿಕೊಂಡಿದ್ದಾರೆ.

ಆಟೋಗ್ರಾಫ್ ಚಿತ್ರದ ದೃಶ್ಯವೊಂದರಲ್ಲಿ ನಾಯಕಿಯನ್ನು ಹುಡುಕಿಕೊಂಡು ಈ ಮನೆ ಬಳಿ ಬರುವ ಸುದೀಪ್ ಕಾರಿಡರ್‌ನಲ್ಲಿ ಸುಮಾರು ಬಾರಿ ಸುತ್ತಾಡ್ತಾರೆ. 15 ವರ್ಷದ ಸುದೀಪ್ ಮತ್ತೆ ಆ ಜಾಗಕ್ಕೆ ಭೇಟಿ ನೀಡಿ, ಆ ಕಾರಿಡರ್ ಪರಿಚಯ ಮಾಡಿಕೊಟ್ಟಿದ್ದಾರೆ. ಪ್ರವೇಶದಲ್ಲಿ ಆನೆಗಳು ಇರುತ್ತದೆ, ಅಲ್ಲೇ ಪಕ್ಕದಲ್ಲಿ ಹಿರಿಯ ಅಜ್ಜಿಯೊಬ್ಬರು ಕುಳಿತಿರುತ್ತಾರೆ.

ಲತಿಕಾ ಮನೆ ಹಾಗೂ ಅದರ ಸುತ್ತ ಮುತ್ತ ಚಿತ್ರೀಕರಣ ನಡೆದ ಸ್ಥಳಕ್ಕೂ ಸುದೀಪ್ ಹೋಗಿದ್ದಾರೆ. ಈ ಅನುಭವವನ್ನು ವಿಡಿಯೋದಲ್ಲಿ ಸೆರೆಹಿಡಿದಿರುವ ಕಿಚ್ಚ 15 ವರ್ಷದ ಹಿಂದಿನ ಕಾಲಕ್ಕೆ ಹಿಂತಿರುಗಿದ್ದಾರೆ. ಬಹುಶಃ ಈ ವಿಡಿಯೋ ನೋಡಿದ್ಮೇಲೆ ಸುದೀಪ್ ಅಭಿಮಾನಿಗಳಿಗೆ ಮತ್ತೊಮ್ಮೆ ಮೈ ಆಟೋಗ್ರಾಫ್ ಸಿನಿಮಾ ನೋಡ್ಬೇಕು ಅನಿಸಿದರೂ ಅಚ್ಚರಿ ಇಲ್ಲ.

Edited By : Nagaraj Tulugeri
PublicNext

PublicNext

29/12/2020 04:29 pm

Cinque Terre

108.98 K

Cinque Terre

4

ಸಂಬಂಧಿತ ಸುದ್ದಿ