ಸ್ಯಾಂಡಲ್‌ವುಡ್‌ನಲ್ಲಿ ಪ್ರಪ್ರಥಮ ಬಾರಿಗೆ ಡಾನ್ಸ್ ಆಧಾರಿತ ಚಿತ್ರವೊಂದು ನಿರ್ಮಾಣಗೊಳ್ಳುತ್ತಿದೆ. ಬಾಲಿವುಡ್‌ನ ಎಬಿಸಿಡಿ ಸ್ಟ್ರೀಟ್ ಡ್ಯಾನ್ಸರ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ನಟ ಸುಶಾಂತ್ ಪೂಜಾರಿ ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.
ಎ.ಎಸ್.ಪ್ರೋಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರಕ್ಕೆ ಕಿಶೋರ್ ಕುಮಾರ್ ಮತ್ತು ಸುಜಯ್ ಎಸ್. ಕಾಮತ್ ಆಕ್ಷನ್ ಕಟ್ ಹೇಳಲಿದ್ದಾರೆ. ಕಿರಣ್ ಶೆಟ್ಟಿ, ಆಶಿಕ ಸುವರ್ಣ, ವಿನೋದ್ ಕುಮಾರ್ ಮತ್ತು ಶಿವರಾಜ್ ಆರ್ ಮೊಗವೀರ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.
ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನು ಎಬ್ಬಿಸಲಿದೆ. ಚಿತ್ರದ ಟೈಟಲ್ ಸದ್ಯದಲ್ಲೇ ಬಿಡುಗಡೆ ಯಾಗಲಿದ್ದು, ಚಿತ್ರತಂಡ ಚಿತ್ರೀಕರಣದ ತಯಾರಿಯಲ್ಲಿ ಬ್ಯುಸಿ ಆಗಿದೆ.
PublicNext
26/12/2020 03:54 pm