ಮುಂಬೈ: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಅಂತ ಏಮ್ಸ್ ವೈದ್ಯರು ನನಗೆ ಹೇಳಿದ್ದರು ಎಂದು ಸುಶಾಂತ್ ಪರ ವಕೀಲ ವಿಕಾಸ್ ಸಿಂಗ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಟ್ವೀಟ್ ಮಾಡಿರುವ ಅವರು, ಸುಶಾಂತ್ ಸಿಂಗ್ ಪ್ರಕರಣದಲ್ಲಿ ಆತ್ಮಹತ್ಯೆಯಲ್ಲ ಅದು ಕೊಲೆ ಎಂದು ಕಂಡು ಹಿಡಿಯುವಲ್ಲಿ ಸಿಬಿಐ ತಡ ಮಾಡಿದೆ. ಇದರಿಂದ ನನಗೆ ನಿರಾಶೆಯಾಗಿದೆ. ಈ ಹಿಂದೆ ನನ್ನ ಜೊತೆ ಮಾತನಾಡಿದ್ದ ಏಮ್ಸ್ ವೈದ್ಯರ ತಂಡದ ಡಾಕ್ಟರ್ ಒಬ್ಬರು, ನಾನು ಕಳುಹಿಸಿದ್ದ ಸುಶಾಂತ್ ಸಿಂಗ್ ಅವರ ಡೆತ್ ಫೋಟೋಸ್ ನೋಡಿ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಅಂತ ಹೇಳಿದ್ದರು" ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಶಾಂತ್ ಸಿಂಗ್ ಪ್ರಕರಣ ಬಾಲಿವುಡ್ ಡ್ರಗ್ ಮಾಫಿಯಾದ ಕಡೆಗೆ ತಿರುವು ಪಡೆದುಕೊಳ್ಳುತ್ತಿದೆ. ಈ ಮೂಲಕ ದಿನಕ್ಕೆ ಓರ್ವ ನಟಿಯ ಫ್ಯಾಶನ್ ಶೋ ನಡೆಯುತ್ತಿದೆ. ಇಂದು ನಾವು ಅಸಹಾಯಕ ಸ್ಥಿತಿಗೆ ತಲುಪ್ಪಿದ್ದೇವೆ. ಸುಶಾಂತ್ ಪ್ರಕರಣ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
PublicNext
25/09/2020 10:48 pm