ಬೆಂಗಳೂರು: ಸಿದ್ದಗಂಗಾ ಶ್ರೀಗಳ ಜೀವನದ ಮೇಲೆ ಸಂಗೀತ ನಿರ್ದೇಶಕ ಹಂಸಲೇಖ ಮಿನಿ ಸಿರೀಸ್ ಮಾಡಲು ಹೊರಟ್ಟಿದ್ದಾರೆ. ಸಿದ್ಧಗಂಗಾ ಶ್ರೀಗಳ ಪಾತ್ರಕ್ಕಾಗಿಯೇ ಬಿಗ್ ಬಿ ಅಮಿತಾಭ್ ಬಚ್ಚನ್ ಅವರನ್ನೂ ಈಗಾಗಲೇ ಅಪ್ರೋಚ್ ಮಾಡಲಾಗಿದೆ.
ಹೌದು. ಶ್ರೀಗಳ 115ನೇ ಜಯಂತೋತ್ಸದ ಹಿನ್ನೆಲೆಯಲ್ಲಿಯೇ ಸಿದ್ದಗಂಗಾ ಶ್ರೀಗಳ ಜೀವನ ಸಾರುವ ಮಿನಿ ಸಿರೀಸ್ ಮಾಡುವ ಪ್ಲಾನ್ ಅನ್ನ ಹಂಸಲೇಖ ಹಾಕಿಕೊಂಡಿದ್ದಾರೆ. 52 ಎಪಿಸೋಡ್‌ಗಳ ಈ ಮಿನಿ ಸೀರಿಸ್ ಕನ್ನಡ, ತೆಲುಗು,ತಮಿಳು, ಮಲಯಾಳಂ,ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಯಲ್ಲೆ ರೆಡಿ ಆಗುತ್ತದೆ.
ಈ ವಿಚಾರಾಗಿಯೇ ಅಮಿತಾಭ್ ಬಚ್ಚನ್ ಅವರನ್ನ ಅಪ್ರೋಚ್ ಮಾಡಲಾಗಿದೆ. ಕಥೆಯನ್ನೂ ಕೂಡ ಹೇಳಲಾಗಿದ್ದು, ಅಮಿತಾಭ್ ಅವರ ಒಪ್ಪಿಗೆಯ ಗ್ರೀನ್ ಸಿಗ್ನಲ್ ಗಾಗಿಯೇ ಕಾಯಲಾಗುತ್ತಿದೆ. ಏಪ್ರಿಲ್-01 ರಂದು ಈ ಸಿನಿ ಸೀರಿಸ್‌ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ಕೊಡಲಿದ್ದಾರೆ.
PublicNext
29/03/2022 10:22 pm