ಧಡಕ್ ಸಿನಿಮಾದ ಮೂಲಕ ನಾಯಕಿಯಾಗಿ ಬಾಲಿವುಡ್ಗೆ ಪರಿಚಿತರಾದ ಜಾಹ್ನವಿ ಕಪೂರ್ ಮದುಮಗಳ ಲುಕ್ ನಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ.
ಸಿನಿಮಾಗಳ ಜೊತೆಗೆ ಫೋಟೋಶೂಟ್ಗಳಲ್ಲೂ ಮಿಂಚುತ್ತಿರುವ ಜಾಹ್ನವಿ ಕಪೂರ್. ಸದ್ಯ ಮದುಮಗಳ ಲುಕ್ನಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದು, ಅಭಿಮಾನಿಗಳಿಗೆ ಈ ಫೊಟೋಶೂಟ್ನ ಚಿತ್ರಗಳು ಸಖತ್ ಇಷ್ಟವಾಗುತ್ತಿವೆ.
ಮರಾಠಿ ಸಿನಿಮಾದ ಹಿಂದಿ ರಿಮೇಕ್ನಲ್ಲಿ ನಟಿಸಿದ ಜಾಹ್ನವಿಗೆ ಬಾಕ್ಸಾಫಿಸ್ನಲ್ಲಿ ಹೇಳಿಕೊಳ್ಳುವ ಮಟ್ಟಕ್ಕೆ ಯಶಸ್ಸು ಸಿಗಲಿಲ್ಲ. ಆದರೂ ಇವರಿಗೆ ಸಿಗುವ ಸಿನಿಮಾಗಳ ಅವಕಾಶಕ್ಕೇನೂ ಕೊರತೆಯಾಗಲಿಲ್ಲ.
ಮದುಮಗಳ ಲುಕ್ನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ ಜಾಹ್ನವಿ, ಇದೇ ಮೊದಲ ಬಾರಿಗೆ ಖ್ಯಾತ ವಸ್ತ್ರ ವಿನ್ಯಾಸಕ ಮನೀಷ್ ಮಲ್ಹೋತ್ರ ಅವರ ಹೊಸ ಕಲೆಕ್ಷನ್ಗೆ ರೂಪದರ್ಶಿಯಾಗಿದ್ದಾರೆ ಜಾಹ್ನವಿ.
PublicNext
24/09/2020 02:38 pm