ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಸಾವಿನ ಸುದ್ದಿ ಅಂತಾರಾಷ್ಟ್ರೀಯ ಮುಂಚೂಣಿ ಸುದ್ದಿ ವಾಹಿನಿ ಬಿಬಿಸಿಯಲ್ಲಿ ಪ್ರಸಾರವಾಗಿದೆ. ಅಪ್ಪು ಅಭಿಮಾನಿಗಳು ಶೋಕದಲ್ಲಿ ಮುಳುಗಿರುವ ಬಗ್ಗೆಯೂ ವರದಿಯಾಗಿದೆ.
ಪುನೀತ್ ಸಾವಿನ ಸುದ್ದಿ ಓದಿದ ಬಿಬಿಸಿ ನಿರೂಪಕಿ ನಂತರ ಲಂಡನ್ ಮೂಲದ ಖ್ಯಾತ ಸಿನಿಮಾ ವಿಮರ್ಶಕಿಯನ್ನು ಸಂದರ್ಶಿಸಿ ಪುನೀತ್ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವಿಮರ್ಶಕಿ ‘ನಾನು ಅವರ ಅಣ್ಣ ಖ್ಯಾತ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದೆ. ಅವರ ಕುಟುಂಬ, ನಾನು ಸೇರಿದಂತೆ ಎಲ್ಲರೂ ಆಘಾತಕ್ಕೊಳಗಾಗಿದ್ದೇವೆ. ನಿನ್ನೆಯಷ್ಟೇ ಅಣ್ಣ ಮತ್ತು ಯಶ್ ಜೊತೆ ವೇದಿಕೆ ಮೇಲೆ ಪುನೀತ್ ಕಾಣಿಸಿಕೊಂಡಿದ್ದರು. ಬೆಳಗ್ಗೆ (ಅ.29) ಪುನೀತ್ ಅವರು ಇನ್ನಿಲ್ಲ ಎಂಬ ಸುದ್ದಿ ಎಲ್ಲರಿಗೂ ದಿಗ್ಭ್ರಮೆ ಹುಟ್ಟಿಸಿದೆ. ಅವರಿಗಿನ್ನೂ ಕೇವಲ 46 ವರ್ಷ ವಯಸ್ಸಾಗಿತ್ತು. ಪ್ರತಿಭಾನ್ವಿತ ನಟರಾಗಿದ್ದ ಅವರು 29 ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಸಾವಿರಾರು ಸಂಖ್ಯೆಯ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ" ಎಂದು ಬಿಬಿಸಿ ವಾಹಿನಿಗೆ ಅವರು ವಿವರಿಸಿದ್ದಾರೆ.
PublicNext
30/10/2021 05:59 pm