ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರಳಿಬಾರದೂರಿಗೆ ಬಾಲು ಪಯಣ

ಎಪ್ಪತ್ತರ ವಯಸ್ಸಿನಲ್ಲೂ ಇಪ್ಪತ್ತರ ಯುವಕನಂತೆ ಹಾಡು ಹೇಳುವ ಗಾಯಕನನ್ನು ಕಳೆದುಕೊಂಡ ಸಮಾಜ ನಿಜಕ್ಕೂ ಬಡವಾಯಿತು.

ಎಸ್ ಪಿಬಿ ಅಗಲಿಕೆ ನಿಜಕ್ಕೂ ತುಂಬಲಾರದ ನಷ್ಟವೇ ಸರಿ…

ಭಾರತೀಯ ಚಿತ್ರರಂಗದ ಅದ್ಭುತ ಗಾಯಕನಾಗಿದ್ದ ಬಾಲಸುಬ್ರಹ್ಮಣ್ಯಂ ಭಾಷಾ ಪರಿಧಿಗಳನ್ನೂ ಮೀರಿ ಸುಮಾರು 16 ಭಾಷೆಗಳಲ್ಲಿ, 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ.

ಇಂತಹ ಗಾನಗಾರುಡಿಗನನ್ನು ಕಳೆದುಕೊಂಡ ನಾವುಗಳು ನಿಜಕ್ಕೂ ದುರ್ದೈವಿಗಳು

ಇಂಜಿನಿಯರಿಂಗ್ ಓದುತ್ತಿದ್ದ ಎಸ್ಪಿ ಬಾಲಸುಬ್ರಹ್ಮಣ್ಯಂ ಅನಿರೀಕ್ಷಿತವಾಗಿ ಗಾಯಕರಾದವರು.

ಆಕಸ್ಮಿಕವಾಗಿ ಗಾಯಕರಾದರೂ ಅವರು ಸಂಗೀತ ಕಲಿತವರಲ್ಲ ಎಂದೆನಿಸದಷ್ಟು ಮಟ್ಟಿಗೆ ಅವರ ಸ್ವರ ಮಾಧರ್ಯವಿತ್ತು.

ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ ಅವರು 1946, ಜೂನ್ 4ರಂದು ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿ ಜನಿಸಿದ್ದರು.

ಒಂದೇ ದಿನ ಎಸ್ ಪಿ ಬಾಲಸುಬ್ರಹ್ಮಣ್ಯಂ ಕನ್ನಡದಲ್ಲಿ 17 ಹಾಡುಗಳ ಧ್ವನಿ ಮುದ್ರಿಸಿದ್ದರು.

ಹಿಂದಿಯಲ್ಲಿ 16 ಹಾಡುಗಳನ್ನು ಹಾಗೂ ತಮಿಳು ತೆಲುಗಿನಲ್ಲಿ ಒಂದೇ ದಿನ 19 ಹಾಡುಗಳನ್ನು ಧ್ವನಿ ಮುದ್ರಿಸಿದ್ದರು.

ಇದು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಇದ್ದ ಬೇಡಿಕೆಗೆ ಅವರ ಸಾಮರ್ಥ್ಯಕ್ಕೆ ನಿದರ್ಶನವಾಗಿದೆ.

ಗಾಯಕನಾಗಿ ಮಾತ್ರವಲ್ಲ ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಕಂಠದಾನ ಕಲಾವಿದರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲಸುಬ್ರಹ್ಮಣ್ಯಂ ಹೆಸರು ಮಾಡಿದ್ದರು.

ಚಿತ್ರರಂಗದಲ್ಲಿನ ಎಸ್ ಪಿ ಬಿ ಸಾಧನೆಗೆ ಅವರು ನಾಲ್ಕು ಭಾಷೆಗಳಲ್ಲಿ ಪಡೆದಿದ್ದ 6 ರಾಷ್ಟ್ರ ಪ್ರಶಸ್ತಿಗಳೇ ಸಾಕ್ಷಿ. 25 ಬಾರಿ ಆಂದ್ರಪ್ರದೇಶ ಸರ್ಕಾರದ ಎಸ್ ಪಿ ಬಿ ಅವರಿಗೆ ನಂದಿ ಪ್ರಶಸ್ತಿ ನೀಡಿ ಗೌರವಿಸಿತ್ತು.

ಪದ್ಮಶ್ರೀ, ಪದ್ಮಭೂಷಣ, ಹಲವು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಅವರನ್ನು ಅರಸಿ ಬಂದಿತ್ತು.

Edited By : Nirmala Aralikatti
PublicNext

PublicNext

25/09/2020 01:53 pm

Cinque Terre

96.2 K

Cinque Terre

30

ಸಂಬಂಧಿತ ಸುದ್ದಿ