ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳ ಪಠ್ಯದಲ್ಲೂ ಪುನೀತ್-ವಾರ್ಷಿಕ ಪರೀಕ್ಷೆಯಲ್ಲಿ ಹಲವು ಕ್ವಶ್ಚನ್ !

ಬೆಂಗಳೂರು: ಪವರ್ ಸ್ಟಾರ್ ಪುನೀತ್ ಪವರೇ ಹಾಗೆ ಬಿಡಿ. ಮಕ್ಕಳು ಸೇರಿದಂತೆ ಎಲ್ಲರಿಗೂ ಪುನೀತ್ ಬಲು ಇಷ್ಟ. ಇಂತಹ ನಟನ ಬಗ್ಗೆ ವಾರ್ಷಿಕ ಪರೀಕ್ಷೆಯಲ್ಲಿ ಮಕ್ಕಳಿಗೆ ಕ್ವಶ್ಚನ್ ಕೇಳೋದಂದ್ರೆ ಸುಮ್ನೇನಾ ? ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಬನ್ನಿ, ಹೇಳುತ್ತೇವೆ.

ಬೆಂಗಳೂರಿನ ವಿಜಯನಗರದ ಆರ್‌.ಪಿ.ಸಿ.ಲೇಔಟ್‌ನಲ್ಲಿ ದಿ ನ್ಯೂ ಕೇಂಬ್ರಿಡ್ಜ್ ಇಂಗ್ಲೀಷ್ ಶಾಲೆ ಇದೆ. ಈ ಶಾಲೆಯಲ್ಲಿ ಮೊನ್ನೆ ನಾಲ್ಕನೆ ತರಗತಿಯ ವಾರ್ಷಿಕ ಪರೀಕ್ಷೆ ಇತ್ತು. ಆ ಪರೀಕ್ಷೆಯಲ್ಲಿಯೇ ಪುನೀತ್ ಬಗ್ಗೆ ಪ್ರಶ್ನೆಯನ್ನು ಕೂಡ ಮಕ್ಕಳಿಗೆ ಕೇಳಲಾಗಿದೆ.

ವಿಶೇಷ ಅಂದ್ರೆ ಐಸಿಎಸ್‌ಇ ಪಠ್ಯಕ್ರಮದ 4ನೇ ತರಗತಿಯ ವಿದ್ಯಾರ್ಥಿಗಳಿಗೆ 2ನೇ ಭಾಷೆ ಕನ್ನಡ ಪರೀಕ್ಷೆಯಲ್ಲಿಯೇ ಪುನೀತ್ ಬಗ್ಗೆ ಪ್ರಶ್ನೆ ಕೇಳಲಾಗಿದೆ.

ಪುನೀತ್ ರಾಜಕುಮಾರ್ ಅವರನ್ನ ಅಭಿಮಾನಿಗಳು ಏನಂದು ಕರೆಯುತ್ತಿದ್ದರು.ಪುನೀತ್ ಜನಿಸಿರೋದು ಯಾವಾಗ ? ಪುನೀತ್ ತಂದೆ ಹೆಸರು ಏನು ? ಎಂಬ ಪ್ರಶ್ನೆಗಳನ್ನೆ ಇಲ್ಲಿ ಕೇಳಲಾಗಿದೆ.

Edited By :
PublicNext

PublicNext

26/03/2022 03:45 pm

Cinque Terre

138.21 K

Cinque Terre

3