ಬೆಂಗಳೂರು:ಹಾಲಿನ ಉತ್ಪನ್ನಗಳಿಗೆ ಹೆಸರಾದ ಅಮೂಲ್ ಕಂಪನಿ ಈಗ ಪುನೀತ್ ರಾಜಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ. ಎಂದಿನಂತೆ ಉತ್ಪನ್ನಗಳ ಜಾಹೀರಾತುಗಳನ್ನ ಸ್ಪೆಷಲ್ ಆಗಿಯೇ ಮಾಡಿಕೊಂಡು ಬಂದ ಅಮೂಲ್,ಅಪ್ಪು ಅವರಿಗೂ ವಿಶೇಷ ಪೋಸ್ಟರ್ ಮೂಲಕವೇ ಗೌರವ ಸಲ್ಲಿಸಿದೆ.
ಪುನೀತ್ ನಿಧನದ ಹಿನ್ನೆಲೆಯಲ್ಲಿಯೇ ಅಮೂಲ್ ಕಂಪನಿ ಈ ಒಂದು ಪೋಸ್ಟರ್ ಮೂಲಕ ಗೌರವ ಸಲ್ಲಿಸಿದೆ. ಯುವರತ್ನ ಫಾರ್ ಮಿಲಿಯನ್ಸ್ ಅಂತಲೇ ಹೇಳಿದೆ. ಪುನೀತ್ 1975-2021 ಅಂತಲು ಜನನ-ಮರಣದ ದಿನವನ್ನೂ ಇದೇ ವಿಶೇಷ ಗೌರವದ ಪೋಸ್ಟರ್ ನಲ್ಲಿಯೇ ಬರೆಯಲಾಗಿದೆ.ಅಂದ್ಹಾಗೆ ಈ ಪೊಸ್ಟರ್ ಇನ್ಟಾಗ್ರಾಮ್ ನಲ್ಲೂ ಶೇರ್ ಆಗಿದೆ.ಇದನ್ನ ಕಂಡ ಅಭಿಮಾನಿಗಳ ಹೃದಯ ತುಂಬಿ ಬಂದಿದೆ. ಹಾರ್ಟ್ ರೂಪದ ಇಮೋಜಿ ಕಳಿಸಿ ಖುಷಿಪಟ್ಟಿದ್ದಾರೆ ಪುನೀತ್ ಫ್ಯಾನ್ಸ್.
PublicNext
31/10/2021 06:26 pm