ಮುಂಬೈ: ಡ್ರಗ್ಸ್ ಪಾರ್ಟಿ ಆರೋಪದ ಮೇರೆಗೆ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ನ್ಯಾಯಾಂಗ ಬಂಧಿಸಿ ವಿಧಿಸಲಾಗಿದೆ. ಇದರಿಂದ ತೀವ್ರ ಆತಂಕಕ್ಕೀಡಾಗಿರುವ ಶಾರುಖ್ ಖಾನ್ಗೆ ಮತ್ತೊಂದು ಆಘಾತ ಎದುರಾಗಿದೆ.
ಶಾರುಖ್ ಖಾನ್ ನಟಿಸಿದ್ದ ಎಲ್ಲ ಜಾಹೀರಾತುಗಳನ್ನು ಬೈಜೂಸ್ ತಡೆ ಹಿಡಿದಿದೆ. ಪುತ್ರ ಆರ್ಯನ್ ಬಂಧನದ ಬಳಿಕವೂ ಶಾರುಖ್ ನಟಿಸಿದ್ದ ಬೈಜೂಸ್ ಸಂಬಂಧಿಸಿದ ಜಾಹೀರಾತು ಪ್ರಸಾರವಾಗುತ್ತಿತ್ತು. ಇದರ ಬೆನ್ನಲ್ಲೇ ಕೆಲ ನೆಟ್ಟಿಗರು, 'ಬೈಜೂಸ್ಗೆ ಪಾಠ ಮಾಡಿದ ಶಾರುಖ್ ತನ್ನ ಮಗನಿಗೆ ಪಾಠ ಮಾಡಲಿಲ್ಲವೇ' ಎಂದು ಕುಟುಕಿದ್ದರು. ಅಷ್ಟೇ ಅಲ್ಲದೆ ಶಾರುಖ್ ಜಾಹೀರಾತು ಸಂಬಂಧ ಬೈಜೂಸ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ವ್ಯಾಪಕ ಟೀಕೆಗೆ ಒಳಗಾದ ಕೆಲವೇ ದಿನಗಳಲ್ಲಿ ಶಾರುಖ್ ನಟಿಸಿದ್ದ ಎಲ್ಲಾ ಜಾಹೀರಾತುಗಳನ್ನು ತಡೆ ಹಿಡಿದಿದೆ. ಶಾರುಖ್ಗೆ ಜಾಹೀರಾತಿಗಾಗಿ ಬೈಜೂಸ್ ವರ್ಷಕ್ಕೆ ಸುಮಾರು 3ರಿಂದ 4 ಕೋಟಿ ರೂಪಾಯಿ ನೀಡುತ್ತಿತ್ತು ಎಂದು ವರದಿಯಾಗಿದೆ.
PublicNext
09/10/2021 03:29 pm