ಡಿ ಬಾಸ್ ಜೊತೆ ರಾಬರ್ಟ್ ಸಿನಿಮಾ ಮಾಡಿದ್ದ ನಟಿ ಆಶಾ ಭಟ್ ಸದ್ಯ ತನ್ನ ಅಜ್ಜಿ ಮನೆ ಶಿರಸಿಯಲ್ಲಿದ್ದಾರೆ. ಕುಟುಂಬದ ಜೊತೆಗೆ ಮಲೆನಾಡಿನ ಪ್ರಕೃತಿ ಸೌಂದರ್ಯ ಸವಿಯುತ್ತಾ, ಅಜ್ಜಿಮನೆಯಲ್ಲಿ ಅಡಿಕೆ ಸುಲಿದು ಎಂಜಾಯ್ ಮಾಡಿದ್ದಾರೆ. ಖುಷಿ ಖುಷಿಯಾಗಿ ಅಡಿಕೆ ಸುಲಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಶೇರ್ ಮಾಡಿ ಅಶಾ ಭಟ್, 'ಅಜ್ಜಿ ಮನೆಯಲ್ಲಿ ಅಡಿಕೆ ಸುಲಿಯುವ ಮಜಾನೇ ಬೇರೆ' ಎಂದು ಬರೆದುಕೊಂಡಿದ್ದಾರೆ.
ಆಶಾ ಭಟ್ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಸ್ಟಾರ್ ನಟಿಯಾಗಿ ಸಾಮಾನ್ಯ ವ್ಯಕ್ತಿಯಂತೆ ಅಡಿಕೆ ಸುಲಿಯುತ್ತಿರುವ ನಿಮ್ಮ ಸರಳತೆ ಇಷ್ಟವಾಯಿತು ಎಂದು ಅನೇಕರು ಹೊಗಳುತ್ತಿದ್ದಾರೆ. ಇನ್ನು ಕೆಲವರು ನೀವು ಪಕ್ಕಾ ಮಲೆನಾಡಿನ ಹುಡುಗಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
PublicNext
23/12/2020 08:05 pm