ಡಿಸೆಂಬರ್ 23 ವಿಶ್ವ ರೈತ ದಿನಾಚರಣೆ. ವಿಶ್ವದಾದ್ಯಂತ ಅನೇಕರು ಅನ್ನದಾತರನ್ನು ನೆನೆದು ಶುಭಾಶಯ ಕೋರುತ್ತಿದ್ದಾರೆ. ದೇಶದ ಬೆನ್ನೆಲುಬಾಗಿರುವ ರೈತರಿಗಾಗಿ ಒಂದು ದಿನ ಮೀಸಲಿಟ್ಟು ಅವರ ದಿನಾಚರಣೆ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಇಡೀ ವಿಶ್ವಕ್ಕೆ ಅನ್ನ ಕೊಡುವವರನ್ನು ಮರೆಯಲು ಸಾಧ್ಯ ಇಲ್ಲ. ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಸಹ ರೈತರನ್ನು ನೆನೆಪಿಸಿಕೊಳ್ಳುತ್ತಿದ್ದಾರೆ. ಮೂರು ಹೊತ್ತು ಹೊಟ್ಟೆ ತುಂಬಿಸುವ ಅನ್ನದಾತರಿಗೆ ಇಂದು ಶುಭಾಶಯ ಕೋರುತ್ತಿದ್ದಾರೆ. ಹಿರಿಯ ನಟ ಜಗ್ಗೇಶ್ ಸಹ ಶುಭ ಕೋರಿ ಮಣ್ಣಲ್ಲಿ ಇರುವ ಸುಖ ಎಲ್ಲೂ ಸಿಗದು ಎಂದಿದ್ದಾರೆ.
ರೈತರ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, 'ತಾತ ಚಿಕ್ಕಪ್ಪಂದಿರು ಹೂಡುತ್ತಿದ್ದ ನೇಗಿಲ ಮೇಲೆ ಬೆಳೆದ ರೈತರಕುಡಿ ನಾನು. 100%ಗೆ 50% ಯುವಕರು ಈ ಕಾಯಕ ಬಿಟ್ಟು ಅಲ್ಪ ಆದಾಯಕ್ಕೆ ಪಟ್ಟಣ ಜೀವನಕ್ಕೆ ಹೋಗಿಬಿಟ್ಟರು. ಬಣಗುಡುತ್ತಿದೆ ಹೊಲಗದ್ದೆ. ಖಾಲಿಕೊಟ್ಟಿಗೆ, ಒಣಗಿದೆ ಗೊಬ್ಬರದಗುಂಡಿ, ಓ ಮನಸೆ ಮಣ್ಣಲ್ಲಿ ಇರುವ ಸುಖ ಎಲ್ಲೂ ಸಿಗದು. ಕೊಂಡು ತಿನ್ನುವುದಕ್ಕಿಂತ ಬೆಳೆದು ಉಣ್ಣುವುದೇ ಲೇಸು ಎಂದು ಕೃಷಿ ಕಾಯಕವನ್ನು ಗುಣಗಾನ ಮಾಡಿದ್ದಾರೆ.
PublicNext
23/12/2020 07:35 pm