ಮುಂಬೈ: ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ 'ದಿ ಕಾಶ್ಮೀರ ಫೈಲ್ಸ್' ಸಿನಿಮಾದ ಚಿತ್ರೀಕರಣದಲ್ಲಿದ್ದ ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಶನಿವಾರ ಚಿತ್ರದ ಸೆಟ್‌ನಲ್ಲಿ ಕುಸಿದು ಬಿದ್ದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಗ್ನಿಹೋತ್ರಿ ಅವರು, "ಆಕ್ಷನ್ ದೃಶ್ಯದ ಚಿತ್ರೀಕರಣದಲ್ಲಿ ಮಿಥುನ್ ಚಕ್ರವರ್ತಿ ನಟಿಸುತ್ತಿದ್ದರು. ಆದರೆ ಇದಕ್ಕೂ ಮುನ್ನ ವಿಷ ಆಹಾರ ಸೇವಿಸಿದ್ದರಿಂದ ಅವರಿಗೆ ನಿಲ್ಲಲು ಸಾಧ್ಯವಾಗದೆ ಕುಸಿದು ಬಿದ್ದಾರೆ. ಹೀಗಾಗಿ ವಿರಾಮ ತೆಗೆದುಕೊಂಡ ಅವರು ಬಳಿಕ ನಟನೆಯಲ್ಲಿ ತೊಡಗಿದರು" ಎಂದು ತಿಳಿಸಿದ್ದಾರೆ.
PublicNext
21/12/2020 03:48 pm