ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೊತೆ ಜೊತೆಯಲಿ ಮೇಘನಾ ಶೆಟ್ಟಿಗೆ ಶಾಕ್: ಇನ್ಸ್ಟಾ ಹ್ಯಾಕ್

ಜೊತೆ ಜೊತೆಯಲಿ ಧಾರಾವಾಹಿ ಕನ್ನಡ ಕಿರುತೆರೆಯ ಶಾನೆ ಟಾಪ್ ಧಾರಾವಾಹಿ ಆಗಿದೆ. ಅದರ ಮೂಲಕ ಕಿರುತೆರೆಗೆ ಕಾಲಿಟ್ಟು ಮನೆ ಮಾತಾದ ನಟಿ ಮೇಘಾ ಶೆಟ್ಟಿ ಅವರಿಗೆ ದೊಡ್ಡ ಶಾಕ್ ಆಗಿದೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಅವರೇ ಹಂಚಿಕೊಂಡಿದ್ದಾರೆ. ಕನಸುಗಣ್ಣಿನ ಚೆಲುವೆ ಮುಗ್ಧ ಅನು ಪಾತ್ರದ ಮೂಲಕ ಜನರ ಮನಗೆದ್ದ ನಟಿ ಮೇಘಾ ಶೆಟ್ಟಿ ನಡೆದಿರುವ ಘಟನೆ ಬಗ್ಗೆ ಬೇಸರ ವ್ಯಕ್ತ ಪಡಿಸಿ ಸ್ಪಷ್ಟನೆ ನೀಡಿದ್ದಾರೆ..

ನಟಿ ಮೇಘಾ ಶೆಟ್ಟಿ ಅವರ ಇನ್ಸ್ಟಾಗ್ರಾಂ ಖ್ಯಾತೆಹ್ಯಾ ಕ್ ಆಗಿದ್ದು ಅದರಿಂದ ಇನ್ನಿತರರಿಗೆ ಮೇಘಾ ಶೆಟ್ಟಿ ಹೆಸರಲ್ಲಿ ಬೇರೆ ಬೇರೆ ರೀತಿಯ ಸಂದೇಶಗಳನ್ನು ಕಳುಹಿಸಿದ್ದಾರೆ.. ಇದರಿಂದ ಆತಂಕಕ್ಕೊಳಗಾಗಿದ್ದ ನಟಿ ಮೇಘಾ ಶೆಟ್ಟಿ ಸ್ಣೆಹಿತರ ಸಹಾಯ ಪಡೆದು ಅಕೌಂಟ್ ಅನ್ನು ರಿಕವರ್ ಮಾಡಿಕೊಂಡಿದ್ದು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಚಾರ ತಿಳಿಸಿರುವ ಮೇಘಾ ಶೆಟ್ಟಿ, ಕೆಲ ದಿನಗಳಿಂದ ನನ್ನ ಅಕೌಂಟ್ ಹ್ಯಾಕ್ ಆಗಿತ್ತು. ಈಗ ರಿಕವರ್ ಮಾಡಿಕೊಂಡಿದ್ದೇನೆ. ಇಷ್ಟು ದಿನ ಏನಾದರೂ ಅನಾನುಕೂಲವಾಗಿದ್ದರೆ ಕ್ಷಮಿಸಿ. ಜೊತೆಗೆ ಬಹಳಷ್ಟು ಜನರಿಗೆ ಅನುಮಾನ ಇದೆ. ಇನ್ಸ್ಟಾಗ್ರಾಂ ಖಾತೆಯನ್ನು ನಾನೇ ಹ್ಯಾಂಡಲ್ ಮಾಡೋದ ಅಥವಾ ಬೇರೆ ಯಾರಾದರು ಹ್ಯಾಂಡಲ್ ಮಾಡುವರಾ ಎಂದು. ಆದರೆ ನನ್ನ ಈ ಅಧಿಕೃತ ಖಾತೆಯನ್ನು ಸ್ವತಃ ನಾನೇ ಹ್ಯಾಂಡಲ್‌ ಮಾಡೋದು.. ಪ್ರತಿಯೊಂದು ಪೋಸ್ಟ್ ಕೂಡ ನಾನೇ ಹಾಕೋದು.. ಇನ್ನು‌ ಮುಂದೆ ಎಂದಿನಂತೆ ನಿಮ್ಮ ಜೊತೆಗೆ ಸದಾ ಟಚ್ ನಲ್ಲಿ ಇರುತ್ತೇನೆ.. ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ ಎಂದಿದ್ದಾರೆ..

Edited By : Nagaraj Tulugeri
PublicNext

PublicNext

18/12/2020 08:24 am

Cinque Terre

76.23 K

Cinque Terre

3