ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲಮಾವು ಕೋಕಿಲ ಸಿನಿಮಾ ಕನ್ನಡವಷ್ಟೇ ಅಲ್ಲಾ ಹಿಂದಿಗೂ ರಿಮೇಕ್ !

ತಮಿಳಿನ ಸೂಪರ್ ಹಿಟ್ ಸಿನಿಮಾ 'ಕೊಲಮಾವು ಕೋಕಿಲಾ' ಕನ್ನಡಕ್ಕೆ ರಿಮೇಕ್ ಆಗುತ್ತಿರುವ ಸುದ್ದಿ ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರದಲ್ಲಿ ರಚಿತಾರಾಮ್ ನಾಯಕಿಯಾಗಿ ನಟಿಸಲಿರುವ ಈ ಸಿನಿಮಾವನ್ನು ಮಯೂರ ರಾಘವೇಂದ್ರ ನಿರ್ದೇಶನ ಮಾಡಲು ಮುಂದಾಗಿದ್ದಾರೆ.

ಈಗಾಗಲೇ ಕನ್ನಡದಲ್ಲಿ 'ಪಂಕಜ ಕಸ್ತೂರಿ' ಎಂಬ ಟೈಟಲ್ ಅಂತಿಮವಾಗಿದ್ದು, ಇದೀಗ ಇದೇ ಸಿನಿಮಾ ಹಿಂದಿಯಲ್ಲೂ ರಿಮೇಕ್ ಆಗಿ ಪ್ರೇಕ್ಷಕರನ್ನ ಸೆಳೆಯಲು ಮುಂದಾಗಿದೆ.

'ಧಡಕ್' ಸಿನಿಮಾ ಮೂಲಕ ಬಾಲಿವುಡ್ ಅಂಗಳದಲ್ಲಿ ಗುರುತಿಸಿಕೊಂಡ ನಟಿ ಶ್ರೀದೇವಿಯವರ ಹಿರಿಯ ಮಗಳು ಜಾಹ್ನವಿ ಕಪೂರ್ 'ಕೊಲಮಾವು ಕೋಕಿಲ' ಚಿತ್ರದ ಹಿಂದಿ ರಿಮೇಕನಲ್ಲಿ ನಟಿಸುವುದು ಪಕ್ಕಾ ಆಗಿದೆ.

ತಮಿಳಿನಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರವು ಪ್ರೇಕ್ಷಕರಿಂದ ಉತ್ತಮ ವಿಮರ್ಶೆ ಮತ್ತು ಹಣ ಗಳಿಕೆಯಲ್ಲಿ ವಿಚಾರದಲ್ಲಿ ಸಖತ್ ಸೌಂಡ್ ಮಾಡಿದ್ದು, ಈಗ ಬಾಲಿವುಡ್ ನಲ್ಲಿ ರಿಮೇಕ್ ಆಗಿ ಹೊಸ ಹವಾ ಸೃಷ್ಟಿಸಲಿದೆ.

ಆನಂದ್ ಎಲ್ ರಾಯ್ ನಿರ್ಮಾಣ ಮಾಡಲಿರುವ ಈ ಚಿತ್ರವನ್ನು 'ಅಗ್ನಿಪಥ್' ಸಿನಿಮಾ ಸೇರಿ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಹೊಂದಿರುವ ಸಿದ್ಧಾರ್ಥ್ ಸೇನ್ ಗುಪ್ತ ನಿರ್ದೇಶನ ಮಾಡಲು ತಯಾರಾಗಿದ್ದಾರೆ.

ಹೊಸ ವರ್ಷ ಅಂದ್ರೇ ಜನವರಿ 7 ರಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು, ಒಟ್ಟು 45 ದಿನಗಳಲ್ಲಿ ಚಿತ್ರಿಕರಣ ಮುಗಿಸುವ ಜವಾಬ್ದಾರಿಯನ್ನ ಸಿನಿಮಾ ತಂಡ ಹೊಂದಿದೆ ಎನ್ನಲಾಗಿದೆ.

Edited By : Nagaraj Tulugeri
PublicNext

PublicNext

17/12/2020 08:40 pm

Cinque Terre

93.11 K

Cinque Terre

1