ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ದಿ ಡರ್ಟಿ ಪಿಕ್ಚರ್' ನಟಿ ಆರ್ಯ ಮರಣೋತ್ತರ ಪರೀಕ್ಷೆ ವರದಿ ಬಹಿರಂಗ

ನವದೆಹಲಿ: 2020 ವರ್ಷವು ಸಾಕಷ್ಟು ಆಘಾತಗಳನ್ನು ನೀಡಿದೆ. ಒಬ್ಬರ ಬೆನ್ನಲ್ಲೇ ಮತ್ತೊಬ್ಬರಂತೆ ಅನೇಕ ಸ್ಟಾರ್‌ ನಟ, ನಟಿಯರ ನಿಧನವು ಚಿತ್ರರಂಗ ಹಾಗೂ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. ವರ್ಷಾಂತ್ಯದಲ್ಲಿ 'ದಿ ಡರ್ಟಿ ಪಿಕ್ಚರ್' ಖ್ಯಾತಿಯ ಬಂಗಾಳಿ ನಟಿ ಆರ್ಯ ಬ್ಯಾನರ್ಜಿ ಅವರ ಹಠಾತ್ ಸಾವು ಆಘಾತವನ್ನುಂಟು ಮಾಡಿದೆ.

ನಟಿ ಆರ್ಯ ಅನೇಕ ಹಿಂದಿ ಚಿತ್ರರಂಗಗಳಲ್ಲಿ ನಟಿಸಿದ್ದಾರೆ. ಅವರ ಸಾವಿನ ಸುದ್ದಿ ಆರ್ಯ ಅವರ ಕುಟುಂಬವನ್ನು ಮಾತ್ರವಲ್ಲದೆ ಅಭಿಮಾನಿಗಳನ್ನೂ ನೋವು ತಂದಿದೆ. ದಕ್ಷಿಣ ಕೋಲ್ಕತ್ತದಲ್ಲಿರುವ ನಿವಾಸದಲ್ಲಿ ನಟಿ ಆರ್ಯ ಬ್ಯಾನರ್ಜಿ, ಶವವಾಗಿ ಪತ್ತೆಯಾಗಿತ್ತು. ಇದು ಅನುಮಾನಾಸ್ಪದ ಸಾವಿನ ಪ್ರಕರಣವೆಂದು ಪರಿಗಣಿಸಲಾಗಿತ್ತು. ಪೊಲೀಸರು ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯ ಬಾಗಿಲು ಒಡೆದು ತೆರೆದು ಪರಿಶೀಲಿಸಿದಾಗ 33 ವರ್ಷದ ನಟಿ ಶವ ಬೆಡ್‌ರೂಂನಲ್ಲಿ ಪತ್ತೆಯಾಗಿತ್ತು.

ಮರಣೋತ್ತರ ಪರೀಕ್ಷೆದ ವೇಳೆ ಆರ್ಯ ಅವರ ಹೊಟ್ಟೆಯಲ್ಲಿ ಸುಮಾರು ಎರಡು ಲೀಟರ್ ಆಲ್ಕೋಹಾಲ್ ಪತ್ತೆಯಾಗಿದೆ. ಹೀಗಾಗಿ ಇದೊಂದು ಕೊಲೆ ಎಂಬ ಆರೋಪವನ್ನು ವೈದ್ಯರು ತಳ್ಳಿಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

13/12/2020 03:51 pm

Cinque Terre

61.31 K

Cinque Terre

0