ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹಾಗೂ ಸಮಂತಾ ಅಕ್ಕಿನೇನಿ ಈಗ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಒಂದು ಕಡೆ ಕುಳಿತು ಚಿಟ್-ಚಾಟ್ ಮಾಡಿದ್ದಾರೆ. ಬಣ್ಣದ ಲೋಕದಲ್ಲಿನ ಅನುಭವ ಹಾಗೂ ಕೆಲವು ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಿಕೊಂಡಿದ್ದಾರೆ.
ಕೋವಿಡ್ ಗೆ ಚಿಕಿತ್ಸೆ ಪಡೆದು ಮರಳಿದ ನಂತರ ತಮನ್ನಾ ಭಾಗವಹಿಸುತ್ತಿರುವ ಮೊದಲ ಟಾಕ್ ಶೋ ಇದಾಗಿದೆ.
ಸಮಂತಾ ನಡೆಸಿಕೊಡುವ ಸ್ಯಾಮ್ ಜಾಮ್ ಅನ್ನುವ ಟಾಕ್ ಶೋನಲ್ಲಿ ಈ ಸಲ ಅತಿಥಿಯಾಗಿ ತಮನ್ನಾ ಭಾಟಿಯಾ ಕಾಣಿಸಿಕೊಂಡಿದ್ದಾರೆ.
ಈ ಬಗ್ಗೆ ತಮ್ಮನಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೊದಲ ಬಾರಿಗೆ ಆನ್ ಸ್ಕ್ರೀನ್ ನಾವಿಬ್ಬರು ಕಾಣಿಸಿಕೊಳ್ಳಲಿದ್ದು, ಈ ಕಾರ್ಯಕ್ರಮ ಡಿ.11ಕ್ಕೆ ಅಂದರೆ ನಾಳೆ ಪ್ರಸಾರವಾಗಲಿದೆ ಎಂದು ತಮನ್ನಾ ಪೋಸ್ಟ್ ಮಾಡಿದ್ದಾರೆ.
ಸ್ಯಾಮ್ ಜಾಮ್ ಕಾರ್ಯಕ್ರಮದಲ್ಲಿ ತಮನ್ನಾ ಅವರ ಈ ಸ್ಟೈಲಿಶ್ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ.
ತಮನ್ನಾ ಅವರ ಈ ಲೆಟೆಸ್ಟ್ ಫೋಟೋಗಳು ಸದ್ಯ ವೈರಲ್ ಆಗುತ್ತಿವೆ. ಸೈಲಿಶ್ ಲುಕ್ ನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಕಂಡಿದ್ದು ಹೀಗೆ
PublicNext
10/12/2020 04:20 pm