ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಸರಿಡದ ಚಿತ್ರದಲ್ಲಿ ರಾಶಿ ಇನ್ ರಶ್ಮಿಕಾ ಔಟ್

ಹೈದರಾಬಾದ್ : ಪೂಜಾ ಹೆಗ್ಡೆ ಸಂಭಾವನೆಯಿಲ್ಲದೆ ನಟಿಸಲು ಮುಂದಾಗಿರುವ ದುಲ್ಕರ್ ಸಲ್ಮಾನ್ ಅಭಿನಯದ ಮತ್ತು ಹನು ರಾಘವಪುಡಿ ನಿರ್ದೇಶನದ ಹೊಸ ಚಿತ್ರ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ.

ಕಳೆದ ವಾರ ಟಾಲಿವುಡ್ ಇದೇ ಚಿತ್ರ ಮಾತುಗಳು ಹೆಚ್ಚಾಗಿದ್ದವು ಸದ್ಯ ಅದೇ ಚಿತ್ರದಿಂದ ಇನ್ನೊಂದು ಸುದ್ದಿ ಬಂದಿದ್ದು, ಈ ಬಾರಿ ಚಿತ್ರಕ್ಕೆ ಮತ್ತೊಬ್ಬ ನಾಯಕಿಯಾಗಿ ರಾಶಿ ಖನ್ನಾ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನೂ ಹೆಸರಿಡದ ಈ ಚಿತ್ರಕ್ಕೆ, ಈ ಮುನ್ನ ರಶ್ಮಿಕಾ ಮಂದಣ್ಣ ಮತ್ತೊಬ್ಬ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.

ಆದರೆ, ಇದೀಗ ಬಂದಿರುವ ಸುದ್ದಿಯ ಪ್ರಕಾರ, ಈ ಚಿತ್ರದಿಂದ ರಶ್ಮಿಕಾ ಹೊರನಡೆದಿದ್ದಾರೆ ಎಂದು ಹೇಳಲಾಗಿದ್ದು, ರಶ್ಮಿಕಾ ಬದಲಿಗೆ ರಾಶಿ ಖನ್ನಾ ನಟಿಸುತ್ತಿದ್ದಾರೆ ಎಂದು ಕೇಳಿ ಬರುತ್ತಿದೆ.

ಟಾಲಿವುಡ್ ನ ಬಹುಬೇಡಿಕೆಯ ನಟಿ ರಶ್ಮಿಕಾ. ಅಲ್ಲದೆ, ಹಲವು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದು, ದುಲ್ಕರ್ ಅಭಿನಯದ ಈ ಹೊಸ ಚಿತ್ರಕ್ಕೆ ಅವರಿಗೆ ಅವಕಾಶ ಬಂದಿದೆ.

ಆದರೆ, ಈಗಾಗಲೇ ಹಲವು ಚಿತ್ರಗಳನ್ನು ಒಪ್ಪಿಕೊಂಡಿರುವ ರಶ್ಮಿಕಾಗೆ ಈ ಚಿತ್ರಕ್ಕೆ ಡೇಟ್ಸ್ ಹೊಂದಿಸುವುದಕ್ಕೆ ಸಾಧ್ಯವಾಗಲಿಲ್ಲವಂತೆ.

ಆ ಕಾರಣಕ್ಕೆ ಅವರು ಈ ಚಿತ್ರದಿಂದ ಹೊರನಡೆದಿದ್ದು, ಅವರ ಬದಲು ರಾಶಿ ಖನ್ನಾ ನಟಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.

Edited By : Nirmala Aralikatti
PublicNext

PublicNext

08/12/2020 01:15 pm

Cinque Terre

37.8 K

Cinque Terre

1