ಚಂದನವನದ ಎವರ್ ಗ್ರೀನ್ ಸ್ಟಾರ್ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ನಿರ್ದೇಶಕ ಹರ್ಷ ಭಜರಂಗಿ-2 ಸಿನಿಮಾ ನಂತರ ಮತ್ತೊಂದು ಸಿನಿಮಾ ಮಾಡುವ ಮುನ್ಸೂಚನೆ ನೀಡಿದ್ದಾರೆ.
ಈಗಾಗಲೇ ಶಿವರಾಜಕುಮಾರ್ ಶಿವಪ್ಪನಾಗಿ ಮಿಂಚಲಿರುವ ಮಧ್ಯದಲ್ಲಿಯೇ ಮತ್ತೊಂದು ಸಿನಿಮಾದ ಟೈಟಲ್ ಲಾಂಚ್ ಆಗಿದೆ.
"ಮುತ್ತುರಾಯ್" ಎನ್ನುವ ಸಿನಿಮಾದಲ್ಲಿ ನಿರ್ದೇಶಕ ಹರ್ಷ ಹಾಗೂ ಶಿವಣ್ಣ ಜೊತೆಯಾಗಿ ಇದುವರೆಗೂ ಆಂಜನೇಯ ವಜ್ರಕಾಯ' ಭಜರಂಗಿ, ಭಜರಂಗಿ-2 ಸೇರಿದಂತೆ ಹೀಗೆ ಆಂಜನೇಯನ ಹೆಸರುಗಳಿಂದ ಯಶಸ್ಸು ಪಡೆದ ಹರ್ಷ ಈ ಬಾರಿ ವಿಶೇಷವಾಗಿ "ಮುತ್ತುರಾಯ್" ಸಿನಿಮಾಗೆ ಎಸ್ ಎಂದಿದ್ದಾರೆ.
ಅಂದಹಾಗೆ ಇದೇ ಸಿನಿಮಾ ಹೆಸರು ಫೈನಲ್ ಅಲ್ಲಾ ಮುಂದೆ ಬದಲಾಯಿಸಬಹುದು ಎಂಬುದು ಹರ್ಷ ಅಭಿಪ್ರಾಯ, ಈ ಚಿತ್ರ ಸೇರಿದ್ರೆ ಶಿವಣ್ಣ ಅವರ ಸಿನಿ ಕರಿಯರ್ 124ನೇಯ ಸಿನಿಮಾಗೆ ಸೈ ಎಂದಂತಾಗುತ್ತದೆ.
ಈ ಮುತ್ತುರಾಯ್ ಸಿನಿಮಾ ಜನವರಿ ತಿಂಗಳಲ್ಲಿ ಸೆಟ್ಟೇರಲಿದೆ. ಈ ಸಿನಿಮಾ ಹರ್ಷ ಮತ್ತು ಶಿವಣ್ಣ ಜೋಡಿಯ ನಾಲ್ಕನೇ ಸಿನಿಮಾ ಆಗಿರಲಿದೆ.
ಈ ಬಗ್ಗೆ ನಿರ್ದೇಶಕ ಹರ್ಷ ಸಿನಿಮಾ ಕಥೆ ಏನು ? ಮುತ್ತುರಾಯ್ ಅಲ್ಲದೆ ಮತ್ತೊಂದು ಹೆಸರನ್ನು ಸಹ ಫೈನಲ್ ಮಾಡಲು ಆಲೋಚನೆ ಮಾಡ್ತಿದ್ದು, ಒಟ್ಟು ಎರಡು ಟೈಟಲ್ ಈ ಸಿನಿಮಾಗೆ ಇವೆ ಎಂದಿದ್ದಾರೆ.
ಈಗಾಗಲೇ ಭಜರಂಗಿ-2 ಚಿತ್ರದ ಶೂಟಿಂಗ್ ಕೆಲಸ ಮುಕ್ತಾಯ ಕಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ವೇಗದಲ್ಲಿದೆ.
ಈ ನಡುವೆ ಭಜರಂಗಿ-2 ಹಿಂದಿ ಡಬ್ಬಿಂಗ್ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು 5.5 ಕೋಟಿ ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿವೆ.
ಶಿವಣ್ಣ ನಟನೆಯ ಪೈಕಿ ಅತಿ ಹೆಚ್ಚು ಡಬ್ಬಿಂಗ್ ರೈಟ್ಸ್ ಪಡೆದ ಸಿನಿಮಾ ಭಜರಂಗಿ-2 ಆಗಿರಲಿದೆ.
PublicNext
07/12/2020 05:10 pm