ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್‌ಗೆ ಸಂಭಾಷಣೆ ಬರೆದಿರುವ ರಾಘವ್ ವಿನಯ್ ನಿರ್ದೇಶನದ ಮೊದಲ ಸಿನಿಮಾದ ಹಾಡಿಗೆ ಸಿದ್ ಶ್ರೀರಾಮ್ ಧ್ವನಿ ನೀಡಿ ಇದೀಗ ಚಂದನವನದ ಸಂಗೀತಕ್ಕೂ ಸೈ ಎಂದಿದ್ದಾರೆ.
ಹೌದು! ರಾಘವ್ ವಿನಯ್ ನಿರ್ದೇಶನದ ಮೊದಲ ಸಿನಿಮಾ "ಟಾಮ್ ಆಂಡ್ ಜೆರ್ರಿ"ಗೆ ಪ್ರಸಿದ್ಧ ಗಾಯಕ ಸಿದ್ ಶ್ರೀರಾಮ್ 'ಹಾಯಾಗಿದೆ ಎದೆಯೊಳಗೆ' ಎಂಬ ಮೆಲೋಡಿ ಹಾಡನ್ನು ಹಾಡಿದ್ದಾರೆ. ಇದು ಕೇಳುಗರಿಗೆ ಸಖತ್ ಕಿಕ್ ಕೊಡುತ್ತದೆ ಎಂಬುದು ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು ಅವರ ಭರವಸೆ.
ಮನರಂಜನೆಯನ್ನೇ ಮುಖ್ಯವಾಗಿಟ್ಟುಕೊಂಡು ಮೂಡಿ ಬರುತ್ತಿರುವ ಈ ಸಿನಿಮಾವನ್ನು ಉದ್ಯಮಿ ರಾಜು ಶೇರಿಗಾರ್ ನಿರ್ಮಾಣ ಮಾಡಿದ್ದಾರೆ. ಬದುಕಿನ ಏರಿಳಿತಗಳ ನಡುವೆ ಸಾಗುವ ಮಧ್ಯಮ ವರ್ಗದ ಜನರ ಬದುಕಿನ ಕಥೆ ಈ ಸಿನಿಮಾದಲ್ಲಿ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ತಲುಪಲಿದೆ.
ಹಿನ್ನೆಲೆ ಗಾಯಕರಾಗಿ ಉನ್ನತ ಮಟ್ಟದ ಹೆಸರು ಮಾಡಿರುವ ಸಿದ್ ಶ್ರೀರಾಮ್ ಈ ಹಿಂದೆ ಕನ್ನಡಕ್ಕೆ ಹಾಡಲು ಅದೆಷ್ಟೇ ಅವಕಾಶ ಒದಗಿ ಬಂದಾಗಲೂ ಅವರು ಹಾಡಿರಲಿಲ್ಲ. ಆದ್ರೇ ಈ 'ಟಾಮ್ ಅಂಡ್ ಜೆರ್ರಿ' ಸಿನಿಮಾದ ಹಾಡು ಸಂಗೀತ ಕೇಳಿ ಎಸ್ ಎಂದಿದ್ದಾರೆ. ಈ ಸಿನಿಮಾಗೆ ಛಾಯಾಗ್ರಹಕರಾಗಿ ಸಂಕೇತ್ ಕಾರ್ಯ ನಿರ್ವಹಿಸಿದ್ದರೆ, ನಿಶ್ಚಿತ್ ಕರೋಡಿ ಚೈತ್ರಾ ರಾವ್ ಚಿತ್ರದ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾದಲ್ಲಿ ಹಿರಿಯ ತಾರಾ ಬಳಗವೇ ಅಭಿನಯದಲ್ಲಿ ಮಿಂಚಲಿದ್ದು ತಾರಾ, ಜೈ ಜಗದೀಶ್, ರಾಕ್ ಲೈನ್ ಸುಧಾಕರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು, ಸಂಪತ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಪಾತ್ರ ಮಾಡಲಿದ್ದಾರೆ.
PublicNext
05/12/2020 09:18 pm