ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ತಡವಾಗಿ ಆರಂಭವಾಗುತ್ತಿರುವ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗಳು ಬಗ್ಗೆ ಭಾರೀ ಕುತೂಹಲ ಮೂಡಿಸಿದೆ.
ಮುಂದಿನ ತಿಂಗಳು ಬಹು ನಿರೀಕ್ಷಿತ ಬಿಗ್ ಬಾಸ್ ಆರಂಭವಾಗಲಿದೆ ಎನ್ನಲಾಗುತ್ತಿದ್ದು, ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಗೆ ಈಗಾಗಲೇ ಚಾಲನೆ ಸಿಕ್ಕಿದೆ ಎಂಬ ಮಾಹಿತಿ ಲಭಿಸಿದೆ. ಈ ಹಿಂದನಂತೆ ಸ್ಪರ್ಧಿಗಳ ಮಾಹಿತಿಯನ್ನು ಬಗ್ಗೆ ಗೌಪ್ಯವಾಗಿಡಲಾಗುತ್ತದೆ. ಆದರೂ ಕೆಲ ಟ್ರೋಲ್ ಪೇಜ್‌ಗಳು ಹಾಗೂ ನೆಟ್ಟಿಗರು ಸ್ಪರ್ಧಿಗಳನ್ನು ಗೆಸ್ ಮಾಡಿದ್ದಾರೆ.
ಸದ್ಯ ಟ್ರೋಲ್ ಪಟ್ಟಿಯಲ್ಲಿ ಜೊತೆ ಜೊತೆಯಲಿ ನಟ ಆರ್ಯವರ್ಧನ್, ನ್ಯೂಸ್ ರೀಡರ್‌ಗಳಾದ ರಾಧಾ ಹಿರೇಗೌಡರ್, ದಿವ್ಯಜೋತಿ, ಡ್ರೋನ್ ಪ್ರತಾಪ್, ನಿತ್ಯಾನಂದ, ಟಿಕ್ ಟಾಕ್ ಚೆಲುವೆಯರಾದ ಸೋನು ಗೌಡ, ಬಿಂದು ಗೌಡ ಸೇರಿದಂತೆ ಅನೇಕರು ಇದ್ದಾರೆ.
ಈ ಟ್ರೋಲ್ ಪೇಜ್‌ಗೆ ಕಮೆಂಟ್ ಮಾಡಿರುವ ಕೆಲ ನೆಟ್ಟಿಗರು ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯಲ್ಲೂ ಸಾಧನೆ ಮಾಡಬಹುದೆಂದು ಕಾಲು ಎಳೆದಿದ್ದಾರೆ.
PublicNext
05/12/2020 03:18 pm