ಮುಂಬೈ: ಸೀರೆ ಅಂದ್ರೆ ಈಗಿನ ಕಾಲದ ಹುಡುಗಿಯರು ನಾನೊಲ್ಲೆ ನೀನೊಲ್ಲೆ ಅಂತಾರೆ. ಹಬ್ಬ ಅಥವಾ ಏನಾದ್ರೂ ಶುಭ ಕಾರ್ಯ ಇದ್ದಾಗಷ್ಟೇ ಅವರು ಸೀರೆ ತೊಡುತ್ತಾರೆ. ಯಾಕಂದ್ರೆ ಸೀರೆ ಕಂಫರ್ಟ್ ಅಲ್ಲ ಅನ್ನುವ ವಾದ ಅವರದ್ದು. ಆದ್ರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಬಾಲಿವುಡ್ ನಟಿ ಮಂದಿರಾ ಬೇಡಿ ಬಳಿಕ ಇದೀಗ ಮತ್ತೊಬ್ಬ ನಟಿ ಸೀರೆಯಲ್ಲಿ ಪುಶ್ ಅಪ್ ಮಾಡಿ ಸುದ್ದಿಯಾಗಿದ್ದಾರೆ.
ಹೌದು. ನಟಿ ಗುಲ್ ಪನಾಗ್ ಅವರು ಸೀರೆಯಲ್ಲಿಯೇ ಪುಶ್ ಅಪ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಪುಶ್ ಅಪ್ ಮಾಡುತ್ತಿರುವ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಎಂದಾದರೂ, ಎಲ್ಲಾದರೂ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಸದ್ಯ ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ಗುಲ್ ಪಾನಗ್ ಅಭಿಮಾನಿಗಳನ್ನು ಸ್ಫೂರ್ತಿಗೊಳಿಸಿದ್ದು, ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ.
ಪನಾಗ್ ಮಾತ್ರವಲ್ಲ ಇದಕ್ಕಿಂತ ಮೊದಲು ಕೆಲ ನಟಿಯರು ಕೂಡ ಸೀರೆಯಲ್ಲಿ ಪುಶ್ ಅಪ್ ಮಾಡಿದ್ದಾರೆ. ನಟಿ ಮಂದಿರಾ ಬೇಡಿ ಈ ಹಿಂದೆ ಸೀರೆಯಲ್ಲಿ ಪುಶ್ ಅಪ್ ಮಾಡಿ ವೀಡಿಯೋ ಮಾಡಿದ್ದರು. ಈ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
PublicNext
26/11/2020 03:38 pm